ಗೋಕಾಕ್ ಅಖಾಡಕ್ಕೆ ದೊಡ್ಡಗೌಡರ ಎಂಟ್ರಿ : ಯಾರಾಗುತ್ತಾರೆ ಗೋಕಾಕ್ನ 'ಸಾಹುಕಾರ' - ಗೋಕಾಕದಲ್ಲಿ ವೇಣುಗೋಪಾಲ್ ಮತಯಾಚನೆ
🎬 Watch Now: Feature Video
ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಉರುಳಲು ಕಾರಣರಾದ ಪ್ರಮುಖರಲ್ಲಿ ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿ ಕೂಡ ಒಬ್ಬರು. ಇದೇ ಕಾರಣಕ್ಕೆ ರಮೇಶ್ ಜಾರಕಿಹೊಳಿಯವರನ್ನ ಮಣಿಸಲು ದಳಪತಿಗಳು ತೊಡೆ ತಟ್ಟಿ ನಿಂತಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ಮಾಜಿ ಸಿಎಂ ಕುಮಾರಸ್ವಾಮಿ ಎರಡು ದಿನ ಗೋಕಾಕ್ನಲ್ಲಿ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಪರ ಭರ್ಜರಿ ಪ್ರಚಾರ ನಡೆಸಿದ್ದರು. ಇಂದು ಕುಂದಾನಗರಿಗೆ ಆಗಮಿಸಿದ ಜೆಡಿಎಸ್ ವರಿಷ್ಠ ದೇವೇಗೌಡ್ರು, ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಪರ ಭರ್ಜರಿ ಮತಪ್ರಚಾರ ನಡೆಸಿದರು.