ರಾಜ್ಯದ ವಿವಿಧೆಡೆ ದೇವರಾಜ ಅರಸು ಜಯಂತಿ ಆಚರಣೆ - 104th birth anniversary
🎬 Watch Now: Feature Video
ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ 104ನೇ ಜನ್ಮ ದಿನಾಚರಣೆಯನ್ನು ರಾಜ್ಯದೆಲ್ಲೆಡೆ ಆಚರಿಸಲಾಯಿತು. ಮುಖ್ಯಮಂತ್ರಿಯಾಗಿ ರಾಜ್ಯದ ಜನಪರವಾಗಿ ಕೆಲಸ ಮಾಡಿದ ಹಾಗೂ ಇಂದಿಗೂ ಜನಮಾನಸದಲ್ಲಿ ಉಳಿದಿರುವ ಡಿ.ದೇವರಾಜ ಅರಸು ಅವರ ಜಯಂತಿಯನ್ನು ಆಚರಣೆ ಮಾಡುವುದರ ಮೂಲಕ ಅವರ ಕಾರ್ಯವೈಖರಿ ಹಾಗೂ ಜನಪರ ಕಾಳಜಿಗಳನ್ನು ಸ್ಮರಿಸಲಾಯಿತು. ವಿವಿಧ ಜಿಲ್ಲೆಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಭೂ ಸುಧಾರಣಾ ಸಮಿತಿಯನ್ನು ರಚಿಸಿ ಉಳುವವನೇ ಹೊಲದೊಡೆಯ ಎಂಬ ನೀತಿ ಘೋಷಿಸಿ ಲಕ್ಷಾಂತರ ಕುಟುಂಬಗಳಿಗೆ ನ್ಯಾಯ ಒದಗಿಸಿದ ಧೀಮಂತ ನಾಯಕನ ಗುಣಗಾನ ಮಾಡಲಾಯಿತು.