ಉಡುಪಿ: ಬೃಹತ್ ಗಾತ್ರದ ನಾಲ್ಕು ಹೆಬ್ಬಾವು ಪತ್ತೆ - ಉಡುಪಿ: ಬೃಹತ್ ಗಾತ್ರದ ನಾಲ್ಕು ಹೆಬ್ಬಾವು ಪತ್ತೆ
🎬 Watch Now: Feature Video
ಉಡುಪಿ: ನಗರದ ಪೂರ್ಣ ಪ್ರಜ್ಞಾ ಕಾಲೇಜು ಆವರಣದ ಖಾಸಗಿ ಸ್ಥಳದಲ್ಲಿದ್ದ ಬೃಹತ್ ಗಾತ್ರದ ನಾಲ್ಕು ಹೆಬ್ಬಾವುಗಳನ್ನು ರಕ್ಷಿಸಲಾಗಿದೆ. ಮೊದಲು 12 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿತ್ತು. ಇದರ ರಕ್ಷಣೆಗೆ ಮುಂದಾದಾಗ ಎಂಟು ಅಡಿ ಉದ್ದದ ಮತ್ತೆರಡು ಹೆಬ್ಬಾವುಗಳು ಪತ್ತೆಯಾಗಿವೆ. ಈ ಮೂರೂ ಹಾವುಗಳನ್ನು ಮೇಲಕ್ಕೆ ಎತ್ತುತ್ತಿದ್ದಂತೆ, ಐದು ಅಡಿ ಉದ್ದ ಮತ್ತೊಂದು ಮರಿ ಹೆಬ್ಬಾವು ಕಂಡುಬಂದಿದೆ. ಈ ಹಾವುಗಳನ್ನು ಉರಗ ತಜ್ಞ ಗಣೇಶ ಆಚಾರ್ಯ ರಕ್ಷಿಸಿದ್ದಾರೆ. ಗಿಡ - ಗಂಟಿಗಳಿಂದ ಕೂಡಿದ ಈ ಜಾಗದಲ್ಲಿ ಮತ್ತಷ್ಟು ಮರಿಹಾವುಗಳಿರುವ ಶಂಕೆ ಇದೆ.