ನೋಟು ಅಮಾನ್ಯೀಕರಣಕ್ಕೆ 3 ವರ್ಷ: ಎದ್ದಿದ್ದು ಎಲ್ಲಿ, ಎಡವಿದ್ದೆಲ್ಲಿ? - ತುಮಕೂರು ನೋಟುಗಳ ಅಮಾನ್ಯೀಕರಣ ಕುರಿತು ಲೆಕ್ಕಪರಿಶೋಧಕ ಪ್ರಕಾಶ ಹೇಳಿಕೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4992752-thumbnail-3x2-dem.jpg)
ತುಮಕೂರು: ನೋಟುಗಳ ಅಮಾನ್ಯೀಕರಣ ಜಾರಿಗೆ ಬಂದು ನವೆಂಬರ್ 8ಕ್ಕೆ 3 ವರ್ಷಗಳಾಗುತ್ತಿದ್ದು, ಪ್ರಮುಖವಾಗಿ ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರಿದೆ. ಇದುವರೆಗೂ ಈ ಉದ್ಯಮ ಚೇತರಿಸಿಕೊಳ್ಳಲು ಸಾಧ್ಯವೇ ಆಗಿಲ್ಲ. ಗರಿಷ್ಠ ಮುಖ ಬೆಲೆಯ ನೋಟು ರದ್ದತಿ ಮಾಡದೆ ಕಪ್ಪುಹಣ ನಿಗ್ರಹಕ್ಕೆ ಆದಾಯ ತೆರಿಗೆ ಪದ್ಧತಿಯಲ್ಲಿ ಇದ್ದ ಸಾಕಷ್ಟು ಅವಕಾಶಗಳನ್ನು ಬಳಸಿಕೊಳ್ಳಬಹುದಿತ್ತು ಎಂದು ಹಿರಿಯ ಲೆಕ್ಕಪರಿಶೋಧಕ ಪ್ರಕಾಶ್ 'ಈಟಿವಿ ಭಾರತ' ಜೊತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.