ಹಣ ಇದ್ದರೂ ರಸ್ತೆ ನಿರ್ಮಾಣಕ್ಕೆ ಮೀನಾಮೇಷ: ಬೇಸತ್ತ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ
🎬 Watch Now: Feature Video
ಕಾರವಾರ: ಕಾಳಿ ನದಿಯ ನಡುಗಡ್ಡೆಯಲ್ಲಿರುವ ತಾಲೂಕಿನ ಶಿವಪುರ ಗ್ರಾಮಕ್ಕೆ ಹತ್ತಾರು ವರ್ಷಗಳ ಹೋರಾಟದ ಬಳಿಕ ರಸ್ತೆ ಮಂಜೂರಾಗಿತ್ತು. ಕಾಮಗಾರಿಯೂ ಪ್ರಾರಂಭವಾಗಿ ಎರಡು ಕಿ.ಮೀ. ಕಾಂಕ್ರಿಟ್ ರಸ್ತೆ ಕೂಡ ನಿರ್ಮಾಣವಾಗಿದೆ. ಆದರೆ, ಬಾಕಿ ಉಳಿದ ಸುಮಾರು 7 ಕಿ.ಮೀ. ರಸ್ತೆ ಕಾಮಗಾರಿ ಕಳೆದ ನಾಲ್ಕೈದು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಸಂಬಂಧಪಟ್ಟ ಗುತ್ತಿಗೆದಾರರು, ಅಧಿಕಾರಿಗಳ ಬಳಿ ರಸ್ತೆ ನಿರ್ಮಾಣಕ್ಕಾಗಿ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕಾರಣದಿಂದಲೇ ಆಕ್ರೋಶಗೊಂಡಿರುವ ಗ್ರಾಮಸ್ಥರು, ಇದೀಗ ಗ್ರಾಮ ಪಂಚಾಯತ್ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.