ಸೆಲ್ಫಿ ಕ್ರೇಜ್: 70 ಅಡಿ ಕೋಟೆ ಮೇಲಿಂದ ಬಿದ್ದು ಯುವಕ ಸಾವು! - Death of a young man by falls from a 70-foot fortress
🎬 Watch Now: Feature Video

ಬೆಳಗಾವಿ: ಸೆಲ್ಫಿ ತೆಗೆದುಕೊಳ್ಳಲು ಕೋಟೆ ಮೇಲೆ ಏರಿದ್ದ ಯುವಕನೋರ್ವ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ದಾರುಣ ಘಟನೆ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ನಡೆದಿದೆ. ಸವದತ್ತಿ ತಾಲೂಕಿನ ರಾಮಾಪುರ ಗ್ರಾಮದ ಶಿವಾನಂದ ಪವಾರ್ (26) ಮೃತ ಯುವಕ. ನಿನ್ನೆ ಸಂಜೆ ಸೆಲ್ಫಿ ತೆಗೆದುಕೊಳ್ಳಲು ಶಿವಾನಂದ ಕೋಟೆ ಮೇಲೇರಿದ್ದ. ಸೆಲ್ಫಿ ತೆಗೆದುಕೊಳ್ಳುವ ಬರದಲ್ಲಿ ಕಾಲು ಜಾರಿ 70 ಅಡಿ ಕೋಟೆ ಮೇಲಿಂದ ಬಿದ್ದಿದ್ದಾನೆ. ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.