ಬಾಬ್ರಿ ಮಸೀದಿ ಧ್ವಂಸ ಪ್ರಕರಣ ತೀರ್ಪಿನಲ್ಲಿ ಸತ್ಯಕ್ಕೆ ಜಯವಾಗಿದೆ: ಡಿಸಿಎಂ ಸವದಿ ಅಭಿಮತ - ಡಿಸಿಎಂ ಲಕ್ಷ್ಮಣ ಸವದಿ
🎬 Watch Now: Feature Video
ಅಥಣಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್.ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಉಮಾ ಭಾರತೀ ಅವರು ಸೇರಿದಂತೆ ಅನೇಕರ ಮೇಲೆ ಆರೋಪ ಪಟ್ಟಿ ದಾಖಲಾಗಿತ್ತು. ಸದ್ಯ ನ್ಯಾಯಾಲಯ ಇಂದು ತೀರ್ಪು ಕೊಟ್ಟಿದು, ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ. ಯಾರೂ ಕೂಡ ಅಪರಾಧಿಗಳಲ್ಲ ಅನ್ನುವ ತೀರ್ಪನ್ನು ನ್ಯಾಯಾಲಯ ನೀಡಿ, ಸತ್ಯವನ್ನು ಎತ್ತಿ ಹಿಡಿದಿದೆ. ಇದರಿಂದ ಮತ್ತೊಮ್ಮೆ ಸತ್ಯಕ್ಕೆ ಜಯ ಸಿಕ್ಕಿದೆ ಇದರಿಂದ ಇಡೀ ದೇಶದಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಲ್ಲಿ ಇದ್ದ ಆತಂಕ ನಿರಾಳವಾಗಿದೆ.ಈ ತೀರ್ಪಿನಿಂದ ಇಡೀ ದೇಶದಲ್ಲಿರುವ ಎಲ್ಲ ಹಿಂದೂಗಳಿಗೂ ಕೂಡ ಸಂತಸವನ್ನುಂಟು ಮಾಡಿದೆ ಎಂದು ಹೇಳಿದ್ದಾರೆ.