ಬೆಣ್ಣೆನಗರಿಯಲ್ಲಿ ರಾಬರ್ಟ್ ಹವಾ: ಜೈ ಶ್ರೀರಾಮ್ ಹಾಡಿಗೆ ಕುಣಿದು ಕುಪ್ಪಳಿಸಿದ ಅಭಿಮಾನಿಗಳು - ದಾವಣಗೆರೆ

🎬 Watch Now: Feature Video

thumbnail

By

Published : Mar 11, 2021, 9:35 AM IST

Updated : Mar 11, 2021, 10:00 AM IST

ಬೆಣ್ಣೆನಗರಿ ದಾವಣಗೆರೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಹವಾ ಜೋರಾಗಿದೆ. ನಗರದ ಆಶೋಕ್​, ತ್ರಿಶೂಲ್, ತ್ರಿನೇತ್ರ ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲಾಗಿದ್ದು, ಬೆಳಗ್ಗೆ 6 ಗಂಟೆಯಿಂದ ಮೊದಲ‌ ಶೋ ಆರಂಭಿಸಲಾಗಿತ್ತು. ಫಸ್ಟ್ ಡೇ ಫಸ್ಟ್ ಶೋ ವೀಕ್ಷಿಸಲು ಮೂರು ಚಿತ್ರಮಂದಿರಗಳ ಬಳಿ ಡಿ ಬಾಸ್ ಅಭಿಮಾನಿಗಳು ಜಮಾಯಿಸಿದ್ದರು. ಸಿನಿಮಾದ ಜೈ ಶ್ರೀರಾಮ್ ಹಾಡು ಆರಂಭವಾಗುತ್ತಿದ್ದಂತೆ ಅಭಿಮಾನಿಗಳು ಚಿತ್ರಮಂದಿರ ಪರದೆ ಬಳಿ ಸಖತ್ ಸ್ಟೆಪ್​ ಹಾಕಿ ಸಂಭ್ರಮಿಸಿದರು. ತ್ರಿಶೂಲ್ ಹಾಗೂ ತ್ರಿನೇತ್ರ ಚಿತ್ರಮಂದಿರಗಳಲ್ಲಿ ಮೊದಲ ಶೋ ಬೆಳಗ್ಗೆ 6 ಕ್ಕೆ ಆರಂಭವಾದರೂ, ಅಶೋಕ ಚಿತ್ರಮಂದಿರದಲ್ಲಿ ಮಾತ್ರ 6:30 ಕ್ಕೆ ತಡವಾಗಿ ಶೋ ಆರಂಭ ಮಾಡಿದ್ದರಿಂದ ಚಿತ್ರಮಂದಿರದ ಸಿಬ್ಬಂದಿ ವಿರುದ್ಧ ಅಭಿಮಾನಿಗಳ ಆಕ್ರೋಶ ವ್ಯಕ್ತಪಡಿಸಿದರು.
Last Updated : Mar 11, 2021, 10:00 AM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.