ವಿಜಯಪುರದಲ್ಲಿ ದಸರಾ ಸಂಭ್ರಮ, ದೇವಿ ಮೂರ್ತಿ ಪ್ರತಿಷ್ಠಾಪಿಸಿ ನವರಾತ್ರಿ ಆಚರಣೆ - Vijayapura dasara
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4690339-thumbnail-3x2-vjpdasara.jpg)
ನಾಡಿನಾದ್ಯಂತ ವಿಜಯದಶಮಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ವಿಜಯಪುರದ ರಾಮ ಮಂದಿರ ರಸ್ತೆಯಲ್ಲಿ ಪ್ರತಿ ವರ್ಷ ನಾಡದೇವಿ ಉತ್ಸವ ಕಮಿಟಿ ದುರ್ಗಾ ಮಾತೆಯ ಮೂರ್ತಿ ಪ್ರತಿಷ್ಠಾಪಿಸಿ ಆರಾಧಿಸುತ್ತಾರೆ. ಎರಡು ದೇವಿ ಮೂರ್ತಿಗಳಿದ್ದು, 101 ಕೆಜಿ ಬೆಳ್ಳಿಯ ದೇವಿ ಮೂರ್ತಿಯನ್ನು ಸಿದ್ದೇಶ್ವರ ಆದಿಶಕ್ತಿ ತರುಣ ಮಂಡಳಿಯವರು ನೀಡಿದ್ದಾರೆ. ನವರಾತ್ರಿಯ ದಿನಗಳಲ್ಲಿ ನಿತ್ಯ ಬಗೆ ಬಗೆಯ ಹೂವುಗಳಿಂದ ದೇವಿ ಮೂರ್ತಿಗಳನ್ನು ಅಲಂಕರಿಸಿ ಪೂಜಿಸಲಾಗುತ್ತದೆ.