ಶಿವಮೊಗ್ಗದಲ್ಲಿ ದಸರಾ ಸಂಭ್ರಮ: ಅಂಧ ಮಕ್ಕಳಿಂದ ಯೋಗ ಪ್ರದರ್ಶನ - ದಸರಾ ಸಂಭ್ರಮ
🎬 Watch Now: Feature Video

ಶಿವಮೊಗ್ಗ: ಸಾಂಸ್ಕೃತಿಕ ದಸರಾದ ಅಂಗವಾಗಿ ನಗರದ ನೆಹರು ಕ್ರೀಡಾಂಗಣದಲ್ಲಿ ಅಂಧ ಮಕ್ಕಳ ಯೋಗಾಸನ ನೆರೆದಿದ್ದವರನ್ನು ಮಂತ್ರ ಮುಗ್ಧರನ್ನಾಗಿ ಮಾಡಿತು. ಗದಗ ಜಿಲ್ಲೆ ರೋಣ ತಾಲೂಕು ಹೊಳೆ ಆಲೂರು ಗ್ರಾಮದ ಜ್ಞಾನ ಸಿಂಧು ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ನಡೆಸಿಕೊಟ್ಟ ಯೋಗಾ ಪ್ರದರ್ಶನ ನೆರೆದಿದ್ದವರನ್ನು ಆಶ್ಚರ್ಯಗೊಳಿಸಿತು. ಶಾಲೆಯ ಮುಖ್ಯಸ್ಥ ಶಿವನಂದ ಕೆಲೂರರವರ ನೇತೃತ್ವದಲ್ಲಿ ಮಕ್ಕಳು ಹನುಮಾಸನ, ಕೂರ್ಮಾಸನ, ದೀಪಾಸನ, ಶಿರ್ಸಾನ ಹೀಗೆ ವಿವಿಧ ಭಂಗಿಯ ಆಸನಗಳನ್ನು ಈ ಮಕ್ಕಳು ಯಾವುದೇ ಅಂಜಿಕೆ ಇಲ್ಲದೆ ನೀರು ಕುಡಿದಂತೆ ಪ್ರದರ್ಶಿಸಿದರು.