ಕೊಡಗಿನಲ್ಲಿ ದಸರಾಕ್ಕೆ ಅದ್ಧೂರಿ ತೆರೆ... ಅಸುರನ ಪ್ರತಿಕೃತಿ ದಹನ - ನಾಡಹಬ್ಬ ದಸರಾ
🎬 Watch Now: Feature Video
ಕೊಡಗು: ರಾಜ್ಯಾದ್ಯಂತ ನಾಡಹಬ್ಬ ದಸರಾವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗಿದ್ದು, ಮಡಿಕೇರಿಯಲ್ಲಿ ದಸರಾದ ಕೊನೆಯ ದಿನವಾದ ಬುಧವಾರದಂದು ವಿಶೇಷ ಕಾರ್ಯಕ್ರಮಗಳನ್ನು ನಗರದಲ್ಲಿ ಏರ್ಪಡಿಸಲಾಗಿತ್ತು. ಬಣ್ಣ ಬಣ್ಣಗಳಿಂದ ಅಲಂಕೃತಗೊಂಡಿದ್ದ ವೇದಿಕೆ ಮೇಲೆ ವಿವಿಧ ಕಾರ್ಯಕ್ರಮಗಳು ಜರುಗಿದವು. ಇನ್ನು ಅಸುರ ಪ್ರತಿಕೃತಿ ದಹನ ಮಾಡಿ ಸಂಭ್ರಮದಿಂದ ನವರಾತ್ರಿ ಆಚರಿಸಲಾಯಿತು.