ಹುಬ್ಬಳ್ಳಿ: ಪಟಾಕಿ ಸಿಡಿಸಿ ಅದ್ದೂರಿಯಾಗಿ ರಾಬರ್ಟ್ ಸಿನಿಮಾ ಸ್ವಾಗತಿಸಿದ ದಚ್ಚು ಅಭಿಮಾನಿಗಳು - ಹುಬ್ಬಳ್ಳಿ ಲೇಟೆಸ್ಟ್ ಅಪ್ಡೇಟ್ ನ್ಯೂಸ್
🎬 Watch Now: Feature Video
ಹುಬ್ಬಳ್ಳಿ: ಬಹು ನಿರೀಕ್ಷಿತ ರಾಬರ್ಟ್ ಸಿನಿಮಾವನ್ನು ವಾಣಿಜ್ಯ ನಗರಿಯ ದಚ್ಚು ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದರು. ಹುಬ್ಬಳ್ಳಿಯ ಎರಡು ಚಿತ್ರಮಂದಿರ ಸೇರಿ ಮಾಲ್ಗಳಲ್ಲಿ ಚಿತ್ರ ಬಿಡುಗಡೆಯಾಗಿದೆ. ಬೆಳಗ್ಗೆಯಿಂದಲೇ ದರ್ಶನ್ ಅಭಿಮಾನಿಗಳು ಚಿತ್ರಮಂದಿರ ಎದುರು ಜಮಾಯಿಸಿದ್ದಾರೆ. ಸುಜಾತಾ ಚಿತ್ರಮಂದಿರದಲ್ಲಿ ದಚ್ಚು ಅಭಿಮಾನಿಗಳು ಥಿಯೇಟರ್ ಸ್ಕ್ರೀನ್ಗೆ ಪೂಜೆ ಸಲ್ಲಿಸಿದರು. ಬಳಿಕ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.