ದ.ಕ ಜಿಲ್ಲೆಯಲ್ಲಿ ವೈದ್ಯರಿಗೂ ಹಬ್ಬಿದೆ ಕೊರೊನಾ: ಹೆಚ್ಚಿದ ಆತಂಕ - ವೈದ್ಯರುಗಳಿಗೆ ಕೊರೊನಾ
🎬 Watch Now: Feature Video
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ ಒಂದೇ ದಿನ 8 ವೈದ್ಯರುಗಳಿಗೆ ಕೊರೊನಾ ದೃಢಪಟ್ಟಿತ್ತು. ಈ ಕಾರಣದಿಂದ ಹಲವು ವೈದ್ಯರುಗಳು ಕ್ವಾರಂಟೈನ್ ನಲ್ಲಿದ್ದು ಇನ್ನಷ್ಟು ವೈದ್ಯರಲ್ಲಿ ಕೊರೊನಾ ದೃಢಪಡುವ ಆತಂಕ ಸೃಷ್ಟಿಯಾಗಿದೆ. ನಿನ್ನೆ 44 ಮಂದಿಯಲ್ಲಿ ಕೊರೊನಾ ದೃಢಪಟ್ಟಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ 749 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, 443 ಮಂದಿ ಗುಣಮುಖರಾಗಿದ್ದಾರೆ. 14 ಮಂದಿ ಮೃತಪಟ್ಟಿದ್ದು 292 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿನ ಕೊರೊನಾ ಮಾಹಿತಿ ಬಗ್ಗೆ ನಮ್ಮ ಪ್ರತಿನಿಧಿ ನಡೆಸಿರುವ ವಾಕ್ ಥ್ರೂ ಇಲ್ಲಿದೆ.
Last Updated : Jul 1, 2020, 10:25 AM IST