ನೆರೆಸಂತ್ರಸ್ತರಿಗೆ ಬೆಂಗಳೂರು ಕೆನರಾ ಬ್ಯಾಂಕ್ ಸಿಬ್ಬಂದಿಯಿಂದ ದಿನನಿತ್ಯದ ಸಾಮಗ್ರಿ ವಿತರಣೆ - ನಿಪ್ಪಾಣಿ ತಹಶೀಲ್ದಾರ್ ಮನವಿ
🎬 Watch Now: Feature Video

ಚಿಕ್ಕೋಡಿ: ಬೆಂಗಳೂರಿನಿಂದ ಆಗಮಿಸಿದ ಕೆನರಾ ಬ್ಯಾಂಕ್‌ನ ಅಧಿಕಾರಿಗಳು ನಿಪ್ಪಾಣಿ ತಹಶೀಲ್ದಾರ್ ಮನವಿ ಮೇರೆಗೆ ಗಡಿಭಾಗದ ಸಂತ್ರಸ್ತರಿಗೆ ದಿನನಿತ್ಯದ ಸಾಮಗ್ರಿಗಳನ್ನು ವಿತರಿಸಿದರು. ನಿಪ್ಪಾಣಿ ಭಾಗದಲ್ಲಿ ತುಂಬಾ ಹಾನಿಯಾಗಿದ್ದು, ನಮ್ಮ ತಾಲೂಕಿನ ಹುಣ್ಣರಗಿ ಗ್ರಾಮದ ಸಂತ್ರಸ್ತರಿಗೆ ದಿನನಿತ್ಯ ಬೇಕಾಗುವ ಸಾಮಗ್ರಿಗಳನ್ನು ನೀಡಿ ಎಂದು ಹೇಳಿದ್ದರಿಂದ ಕೆನರಾ ಬ್ಯಾಂಕ್‌ನ ಸಿಬ್ಬಂದಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಹುಣ್ಣರಗಿ ಗ್ರಾಮದ 519 ಕುಟುಂಬದವರಿಗೆ ದಿನ ಬಳಕೆಯ ಸಾಮಗ್ರಿಗಳನ್ನು ವಿತರಿಸಿದರು.
Last Updated : Aug 30, 2019, 6:15 PM IST