ಅಪಾಯ ಲೆಕ್ಕಿಸದೇ ತೆಪ್ಪ ಬಳಸುತ್ತಿರುವ ಡಿ.ರಾಂಪೂರು ಗ್ರಾಮಸ್ಥರು! - krishna river
🎬 Watch Now: Feature Video
ರಾಯಚೂರು: ಕೃಷ್ಣಾ ನದಿ ತೀರದ ಹಳ್ಳಿಗಳಲ್ಲಿ ಪ್ರವಾಹ ಉಂಟಾಗಿದೆ. ನದಿ ನೀರಿನ ಪ್ರಮಾಣ ಹೆಚ್ಚಾಗಿರುವ ಕಾರಣ ಸಾರ್ವಜನಿಕರಿಗೆ ತೆಪ್ಪಗಳ ಬಳಕೆ ನಿಷೇಧ ಮತ್ತು ಎನ್ಡಿಆರ್ಎಫ್ ತಂಡದ ಸಹಾಯವಿಲ್ಲದೇ ಅಪಾಯವನ್ನು ಮೈಮೇಲೆ ಹಾಕಿಕೊಳ್ಳಬೇಡಿ ಎಂದು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಡಂಗುರ ಸಾರಿದರೂ ಕೂಡ ಇದನ್ನು ಲೆಕ್ಕಿಸದೆ ತಾಲೂಕಿನ ಡಿ.ರಾಂಪೂರು ಗ್ರಾಮದಲ್ಲಿ ತೆಪ್ಪ ಬಳಕೆ ಮಾಡಿದ್ದಾರೆ. ನೀರು ಹೊಲ-ಗದ್ದೆಗಳಿಗೆ ನುಗ್ಗಿದ ಪರಿಣಾಮ ಮೋಟರ್, ಪಂಪ್ಸೆಟ್ ಹಾಗೂ ಇತರೆ ಕೃಷಿ ವಸ್ತುಗಳನ್ನು ತರುವ ಸಲುವಾಗಿ ರೈತರು ತೆಪ್ಪದ ಮೊರೆ ಹೋದರು.