ಸಿಲಿಂಡರ್​ ಬ್ಲಾಸ್ಟ್.. ಧಗ ಧಗನೆ ಹೊತ್ತಿ ಉರಿದ ಮನೆ.. - ಗ್ಯಾಸ್ ಲೀಕ್ ಆಗುತ್ತಿದ್ದಂತೆ ಮನೆಯಿಂದ ಓಡಿದ ಕುಟುಂಬಸ್ಥರು

🎬 Watch Now: Feature Video

thumbnail

By

Published : Sep 24, 2019, 10:05 PM IST

ಎರಡು ಗ್ಯಾಸ್​ ಸಿಲಿಂಡರ್​ ಬ್ಲಾಸ್ಟ್​ ಆದ ಕಾರಣ ಮನೆಯೇ ಹೊತ್ತಿ ಉರಿದಿರುವ ಘಟನೆ ಇಂದು ಸಂಜೆ ರಾಯಚೂರಿನ ಅಯ್ಯಣ್ಣ ಎಂಬುವರ ಮನೆಯಲ್ಲಿ ನಡೆದಿದೆ. ಸಿಲಿಂಡರ್​ ಬ್ಲಾಸ್ಟ್​ ಆಗುವ ಮುನ್ನ ಗ್ಯಾಸ್ ಲೀಕ್ ಆಗುತ್ತಿದೆ ಎಂಬುದನ್ನ ಅರಿತ ಮನೆಯವರು, ಕೂಡಲೇ ಅಲ್ಲಿಂದ ಓಡಿದ್ದು, ಅದೃಷ್ಠವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹೊತ್ತಿ ಉರಿಯುತ್ತಿರುವ ಬೆಂಕಿಯನ್ನು ಕಂಡು ಬಡಾವಣೆ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ. ಇನ್ನು, ಸ್ಥಳಕ್ಕೆ ಎರಡು ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.