ಕಾಲೇಜ್ನಲ್ಲಿ ಜನಪದ ಜಾತ್ರೆ... ಧೋತಿ, ಇಳಕಲ್ ಸೀರೆಯಲ್ಲಿ ಮಿಂಚಿದ ಸ್ಟುಡೆಂಟ್ಸ್ - ಜಾನಪದ ಸೊಗಡು
🎬 Watch Now: Feature Video

ಕಾಲೇಜು ಎಂದರೆ ಅಲ್ಲಿ ವಿದ್ಯಾರ್ಥಿಗಳು ನಿತ್ಯ ಚೂಡಿದಾರ್, ಮಿಡಿ, ಜೀನ್ಸ್ ಪ್ಯಾಂಟ್, ಟೀ ಶರ್ಟ್ ಹಾಕಿಕೊಂಡು ಬರ್ತಾರೆ. ಆದ್ರೆ, ಇಂದು ಅವರೆಲ್ಲ ಇಳಕಲ್ ಸೀರೆ ತೊಟ್ಟು ಫುಲ್ ಮಿಂಚುತ್ತಿದ್ರು. ಯುವಕರು ನಾವೇನ್ ಕಮ್ಮಿ ಅಂತ ಧೋತಿ, ರುಮಾಲ್, ಲುಂಗಿ ತೊಟ್ಟು ಪಕ್ಕಾ ಹಳ್ಳಿ ಸೊಗಡಿನಲ್ಲಿ ಎಂಟ್ರಿ ಕೊಟ್ಟಿದ್ರು. ಆ ಕಾಲೇಜ್ ಆವರಣದಲ್ಲಿ ವಿದ್ಯಾರ್ಥಿಗಳ ಜಾನಪದ ಜಾತ್ರೆ ಸಡಗರ ಸಂಭ್ರಮದಿಂದ ಕೂಡಿತ್ತು.