ಬಿಜೆಪಿಯವರಿಗೆ ಪ್ರಶಸ್ತಿ ನೀಡಬಾರ್ದು ಅಂತಾ ಯಾವ ನಿಯಮವೂ ಇಲ್ಲ: ಸಚಿವ ಸಿ.ಟಿ.ರವಿ - Kannada Rajyotsava Award
🎬 Watch Now: Feature Video
ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಬಿಜೆಪಿ ಬೆಂಬಲಿಗರಿಗೆ ನೀಡಿದ್ದಾರೆ ಎಂಬ ಆರೋಪಕ್ಕೆ ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಂದ 358ಕ್ಕೂ ಹೆಚ್ಚು ಸಲಹೆಗಳಲ್ಲಿ ಅರ್ಜಿ ಹಾಕಿರೋರಿಗೂ ಹಾಕದೇ ಇರೋರಿಗೂ ಪ್ರಶಸ್ತಿ ನೀಡಿದ್ದೇವೆ. ಬಿಜೆಪಿ ಅವರಿಗೆ ಪ್ರಶಸ್ತಿ ನೀಡಬಾರದು ಎಂಬ ನಿಯಮವೇನು ಇಲ್ಲವಲ್ಲ. ನಾವು ಎಲ್ಲಾ ಅರ್ಜಿ ಪರಿಶೀಲನೆ ಮಾಡಿ ಆಯ್ಕೆ ಸಮಿತಿಗೆ ಕಳುಹಿಸಿ ಆಯ್ಕೆ ಮಾಡಿದ್ದೇವೆ. ಇಲ್ಲಿ ಯಾರ ಯೋಗ್ಯತೆಯನ್ನು ಪ್ರಶ್ನೆ ಮಾಡುತ್ತಿಲ್ಲ. ಇಲ್ಲಿ ಯಾವುದೇ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಸರಿಯಾಗಿಯೇ ಆಯ್ಕೆ ಮಾಡಿದ್ದೇವೆ ಎಂದು ಸಿ.ಟಿ.ರವಿ ಹೇಳಿದ್ದಾರೆ.