ಬಾಳೆಹೊನ್ನೂರಿನ ಭದ್ರಾ ಸೇತುವೆ ಬಳಿ ಮೊಸಳೆ ಪ್ರತ್ಯಕ್ಷ.....ಕೋಳಿ ಅಂಗಡಿಯವರ ವಿರುದ್ಧ ಸ್ಥಳೀಯರ ಆಕ್ರೋಶ! - ಮೊಸಳೆ ಪ್ರತ್ಯಕ್ಷ ಲೆಟೆಸ್ಟ್ ನ್ಯೂಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5738782-thumbnail-3x2-ckmm.jpg)
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರುನಲ್ಲಿರುವ ಭದ್ರಾ ನದಿ ತೀರದಲ್ಲಿ ಮೊಸಳೆ ಪ್ರತ್ಯಕ್ಷವಾಗಿದೆ. ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ಭದ್ರಾ ಸೇತುವೆ ಬಳಿ ಮೊಸಳೆ ಪ್ರತ್ಯಕ್ಷವಾಗಿದ್ದು ಮೊಸಳೆಯನ್ನು ನೋಡಿ ಸ್ಥಳೀಯರು ಗಾಬರಿಯಾಗಿದ್ದಾರೆ. ಮೊಸಳೆ ಕಾಣಿಸಿಕೊಂಡ ಹಿನ್ನಲೆ ನದಿಯ ಸೇತುವೆಯ ಅಕ್ಕ ಪಕ್ಕದ ಕೋಳಿ ಅಂಗಡಿಗಳ ತ್ಯಾಜ್ಯವನ್ನ ನದಿ ತೀರಕ್ಕೆ ಎಸೆಯುವ ಕಾರಣ ಮೊಸಳೆಗಳು ಕಾಣಿಸಿಕೊಳ್ಳುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.