ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡ ಮೊಸಳೆ: ಸೆರೆಹಿಡಿದ ಗ್ರಾಮಸ್ಥರು - Belgavi

🎬 Watch Now: Feature Video

thumbnail

By

Published : Sep 9, 2019, 9:15 PM IST

ಚಿಕ್ಕೋಡಿ: ಕೃಷ್ಣಾ ನದಿಯ ಪ್ರವಾಹಕ್ಕೆ ನದಿಯ‌ ನೀರನ‌ ಮಟ್ಟದಲ್ಲಿ ಏರಿಕೆಯಾದ‌ ಪರಿಣಾಮ ಆಹಾರ ಅರಸುತ್ತಾ ಜನವಸತಿ ಪ್ರದೇಶದತ್ತ ಮೊಸಳೆ ಬಂದಿದ್ದು, ಗ್ರಾಮಸ್ಥರು ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ಈ ಘಟನೆ ಜರುಗಿದೆ. ಸತ್ತಿ ಗ್ರಾಮದ ನಂದೇಶ್ವರ ರಸ್ತೆಗೆ ಹೊಂದಿಕೊಂಡಿರುವ ಅತ್ತಾರ ಜನವಸತಿಯಲ್ಲಿ ಮೊಸಳೆ ಕಾಣಿಸಿಕೊಂಡಿದೆ. ತೋಟದಲ್ಲಿ ಕೆಲಸ ಮಾಡುತ್ತಿರುವವರಿಗೆ ವಿಚಿತ್ರ ಧ್ವನಿ ಕೇಳಲಾರಂಭಿಸಿದೆ. ಆ ಧ್ವನಿ ಆಲಿಸಿಕೊಂಡು ಹೋದಾಗ ಜನವಸತಿ ಪ್ರದೇಶದಲ್ಲಿ ಮೊಸಳೆ ಇರುವುದು ಗೊತ್ತಾಗಿ, ಅದನ್ನು ಹಿಂಬಾಲಿಸಿ ಹಗ್ಗದಿಂದ ಕಟ್ಟಿ ಹಾಕಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.