ಹಾನಗಲ್: ಗೋವುಗಳಿಗೆ ಸೀಮಂತ ಮಾಡಿ ಅಧಿಕಾರಿಯ ಜನ್ಮದಿನಾಚಣೆ - unique birthday celebrated in hangal news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9701647-thumbnail-3x2-birthday.jpg)
ಹಾನಗಲ್: ಹಿರಿಯ ಕೆಎಎಸ್ ಅಧಿಕಾರಿ ಮತ್ತು ರಾಜ್ಯ ಕೃಷಿ ಜಂಟಿನಿರ್ದೇಶಕರಾದ ಅಕ್ಕಿಆಲೂರಿನ ವಿಶ್ವನಾಥ ಹಿರೇಮಠ ಅವರ ಜನ್ಮದಿನಾಚರಣೆಯನ್ನ ಹಾವೇರಿ ಜಿಲ್ಲೆಯ ಹಾನಗಲ್ನಲ್ಲಿ ವಿಶೇಷ ರೀತಿ ಆಚರಿಸಲಾಗಿದೆ. ಅವರ ಅಭಿಮಾನಿ ಬಳಗವು ಇನಾಂಲಕ್ಮಾಪುರದಲ್ಲಿರುವ ಗೋಶಾಲೆಗೆ ತೆರಳಿ ಗರ್ಭಧರಿಸಿರುವ ಗೋವುಗಳಿಗೆ ಶಾಲುಗಳನ್ನ ಹೊದಿಸಿ, ಹೂವಿನ ಮಾಲೆ ಹಾಕಿ ಅರ್ಚಕರಿಂದ ಮಂತ್ರಗಳನ್ನ ಹೇಳಿಸಿ ಅಕ್ಷತೆ ಹಾಕಿ ಸೀಮಂತ ಕಾರ್ಯ ಮಾಡಿ ವಿಶಿಷ್ಟವಾಗಿ ಹುಟ್ಟುಹಬ್ಬ ಆಚರಿಸಿದರು. ಈ ಸಂದರ್ಭದಲ್ಲಿ, ವಿಶ್ವನಾಥ ಬಿಕ್ಷಾವರ್ಥಿಮಠ, ಕೃಷ್ಣಾ ಈಳಗೇರ, ಸಂತೋಷ ಅಪ್ಪಾಜಿ, ಶಿದ್ಲಿಂಗಪ್ಪ, ರಾಮು ಯಳ್ಳೂರ ಮುಂತಾದವರು ಪಾಲ್ಗೊಂಡಿದ್ದರು.