‘ಕೋವಿಶೀಲ್ಡ್’ ಲಸಿಕೆಯ ಮೊದಲನೇ ಹಂತದ ಪರೀಕ್ಷೆ ಮೈಸೂರಿನಲ್ಲಿ ಆರಂಭ - vaccine testing
🎬 Watch Now: Feature Video

ಮೈಸೂರು : ಸಂಶೋಧಿತ ‘ಕೋವಿಶೀಲ್ಡ್’ ಲಸಿಕೆಯ ಮೊದಲನೇ ಹಂತದ ಪ್ರಯೋಗವು ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಆರಂಭವಾಗಿದ್ದು, ಐವರು ಸ್ವಯಂ ಸೇವಕರಿಗೆ ಲಸಿಕೆಯನ್ನು ಇಂದಿನಿಂದ ನೀಡಲಾಗುತ್ತದೆ ಎಂದು ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಕ್ನ ಸಮಕುಲಾಧಿಪತಿ ಬಿ.ಸುರೇಶ್ ಈಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು. ಕೊರೊನಾಗೆ ಕಂಡು ಹಿಡಿದ ಲಸಿಕೆ ಇದಾಗಿದ್ದು ಮೊದಲ ಮಾನವ ಪ್ರಯೋಗವು ರಾಜ್ಯದ ಮೈಸೂರಿನಲ್ಲಿ ನಡೆಯುತ್ತಿದೆ. ಐವರು ಸ್ವಯಂ ಸೇವಕರ ಮೇಲೆ ಪ್ರಾಯೋಗಿಕವಾಗಿ ಫಸ್ಟ್ ಇಂಜೆಕ್ಷನ್ ಅನ್ನು ನೀಡುತ್ತಿದ್ದೇವೆ. ನವೆಂಬರ್ ಅಥವಾ ಡಿಸೆಂಬರ್ ಅಂತ್ಯಕ್ಕೆ ಪ್ರಯೋಗದ ಫಲಿತಾಂಶ ಬರಲಿದೆ ಎಂದು ಅವರು ತಿಳಿಸಿದರು.