ತುಮಕೂರು ಜಿಲ್ಲೆಯಲ್ಲಿ ಕೊರೊನಾ ಲಸಿಕೆ ಅಭಾವ: ಜನರ ಪರದಾಟ - ತುಮಕೂರಲ್ಲಿ ಕೊರೊನಾ ಲಸಿಕೆ ಅಭಾವ
🎬 Watch Now: Feature Video
ತುಮಕೂರು: ಕೊರೊನಾ ಮಹಾಮಾರಿಯಿಂದ ಭಯಭೀತವಾಗಿರುವ ಜನರು ವ್ಯಾಕ್ಸಿನ್ ಪಡೆಯಲೆಂದು ಲಸಿಕಾ ಕೇಂದ್ರಗಳಿಗೆ ತೆರಳುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿ ಲಸಿಕಾ ಕೇಂದ್ರಗಳಿಗೆ ದಿನ ಬಿಟ್ಟು ದಿನ 5 ಸಾವಿರ ವ್ಯಾಕ್ಸಿನ್ ಸರಬರಾಜು ಆಗುತ್ತಿದೆ. ಇದರಿಂದ ಲಸಿಕೆ ಅಭಾವ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಲಸಿಕಾ ಕೇಂದ್ರದ ಮುಂದೆ ನೋ ವ್ಯಾಕ್ಸಿನ್ ಎಂಬ ಬೋರ್ಡ್ ಹಾಕಲಾಗಿದೆ. ಹೀಗಾಗಿ, ವ್ಯಾಕ್ಸಿನ್ ಕೇಂದ್ರಗಳಿಗೆ ಜನರು ಬಂದು ಹಿಂತಿರುಗುತ್ತಿರುವ ದೃಶ್ಯಗಳು ಸಾಮಾನ್ಯವಾಗಿದ್ದವು. ಈ ಕುರಿತಂತೆ ನಮ್ಮ ಪ್ರತಿನಿಧಿ ಹೆಚ್ಚಿನ ಮಾಹಿತಿ ನೀಡಿದ್ದಾರೆ.