ಕಾರಾಗೃಹದಲ್ಲಿ ಆತಂಕ ಹೆಚ್ಚಿಸಿದ ಕೊರೊನಾ; ಕೈದಿಗಳಿಗೆ ಬಿಡುಗಡೆ ಭಾಗ್ಯ - Covid attack on Prisons
🎬 Watch Now: Feature Video
ಬೆಂಗಳೂರು/ಬೆಳಗಾವಿ/ಬಳ್ಳಾರಿ: ಕೊರೊನಾ ಹಿನ್ನೆಲೆ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಈಗಾಗಲೇ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿರುವ 140 ಮಂದಿಯನ್ನು ತಾತ್ಕಾಲಿಕವಾಗಿ ಬಿಡುಗಡೆಗೊಳಿಸಲು ಸಿದ್ಧತೆ ಮಾಡಲಾಗುತ್ತಿದೆ. ಇಲ್ಲಿನ ಕೈದಿಗಳಲ್ಲಿ 73 ಮಂದಿಗೆ ಕೋವಿಡ್ ಸೋಂಕು ತಗುಲಿದ್ದು 61 ಮಂದಿ ಗುಣಮುಖರಾಗಿದ್ದಾರೆ. ಉಳಿದ 12 ಮಂದಿಗೆ ಜೈಲಿನ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಮುಂದುವರೆಸಲಾಗಿದೆ. ಇನ್ನು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಪೆರೋಲ್ ಮೇಲೆ ಹೋಗಿ ಮರಳಿದ್ದ ಕೈದಿ ಹಾಗೂ ಓರ್ವ ವಿಚಾರಣಾಧೀನ ಕೈದಿಗೆ ಸೋಂಕು ದೃಢಪಟ್ಟಿದೆ. ಕ್ವಾರಂಟೈನ್ ಸೆಲ್ನಲ್ಲಿದ್ದ ಇಬ್ಬರನ್ನು ವರದಿ ಬಂದ ತಕ್ಷಣವೇ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಬಳ್ಳಾರಿ ಜೈಲಿನಲ್ಲಿಯೂ ಸಹ ಸೋಂಕು ತಡೆಗೆ ಹತ್ತು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೊಸದಾಗಿ 8 ಕೈದಿಗಳಿಗೆ ಸೋಂಕು ತಗುಲಿದ್ದು ಅವರನ್ನು ಪ್ರತ್ಯೇಕವಾಗಿ ಇರಿಸಲು ಕ್ರಮ ಕೈಗೊಳ್ಳಲಾಗಿದೆ.