ದನದ ಕೊಟ್ಟಿಗೆಯಲ್ಲಿ ಜೋಡಿ ಹೆಬ್ಬಾವು ಪತ್ತೆ - python eggs found latest news
🎬 Watch Now: Feature Video
ಉಡುಪಿಯ ಕಟಪಾಡಿಯಲ್ಲಿ ದನದ ಕೊಟ್ಟಿಗೆಯಲ್ಲಿ ಜೋಡಿ ಹೆಬ್ಬಾವು ಮತ್ತು 31 ಮೊಟ್ಟೆಗಳು ಸಿಕ್ಕಿವೆ. ಕಟಪಾಡಿ ವಿಶ್ವನಾಥ ಕ್ಷೇತ್ರ ಸಮೀಪ ರಾಮಚಂದ್ರ ಪೈ ಎಂಬುವರ ಹಳೆಯ ಹಟ್ಟಿ ಕೊಟ್ಟಿಗೆಯಲ್ಲಿ ಒಂದು ಹೆಬ್ಬಾವು 16 ಮೊಟ್ಟೆಗಳಿಗೆ ಕಾವು ಕೊಡುತ್ತಿತ್ತು. ಇದನ್ನು ಗಮನಿಸಿದ ರಾಮಚಂದ್ರ ಪೈ ಉರಗ ತಜ್ಞರಾದ ಮನು ಪೈ ಅವರಿಗೆ ವಿಷಯ ತಿಳಿಸಿದ್ದಾರೆ. ಮನು ಪೈ ಸ್ಥಳಕ್ಕಾಗಮಿಸಿದಾಗ ಅಲ್ಲೇ ಇನ್ನೊಂದು ಹೆಬ್ಬಾವು 15 ಮೊಟ್ಟೆಗಳಿಗೆ ಕಾವು ಕೊಡುತ್ತಿದ್ದುದು ಗಮನಕ್ಕೆ ಬಂದಿದೆ. ಬಳಿಕ ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಎರಡು ಹೆಬ್ಬಾವು ಮತ್ತು ಮೊಟ್ಟೆಗಳನ್ನು ಸುರಕ್ಷಿತವಾಗಿ ತೆಗೆದು ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಅರಣ್ಯಾಧಿಕಾರಿಗಳು ಮೊಟ್ಟೆ ಮತ್ತು ಹೆಬ್ಬಾವುಗಳನ್ನು ಪಿಲಾರು ಅರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಟ್ಟಿದ್ದಾರೆ.