ದೇಶಾದ್ಯಂತ ನಾಳೆ ಮದ್ಯದಂಗಡಿ​ ಓಪನ್; ಎಣ್ಣೆಪ್ರಿಯನಿಂದ ಅಂಗಡಿಯೆದುರು ಕಾಯಿ ಒಡೆದು ಪೂಜೆ - ಬಾರ್​ ಅಂಗಡಿ ಓಪನ್​

🎬 Watch Now: Feature Video

thumbnail

By

Published : May 3, 2020, 5:01 PM IST

ಕೋಲಾರ: ನಾಳೆಯಿಂದ ಮೇ.17ರವರೆಗೆ ದೇಶದಲ್ಲಿ ಲಾಕ್​ಡೌನ್​ ವಿಸ್ತರಣೆಗೊಂಡಿದ್ದು, ಇದರ ಮಧ್ಯೆ ಎಲ್ಲ ಮೂರು ಝೋನ್​​​ಗಳಲ್ಲಿ ಮದ್ಯದಂಗಡಿ ಓಪನ್​ ಮಾಡಲು ಅವಕಾಶ ನೀಡಲಾಗಿದೆ. ಮದ್ಯದ ಅಂಗಡಿ ಓಪನ್​ ಆಗುವುದರಿಂದ ಪುಲ್​ ಖುಷಿಯಲ್ಲಿರುವ ಎಣ್ಣೆ ಪ್ರೀಯರು ಈಗಾಗಲೇ ಕ್ಯೂನಲ್ಲಿ ನಿಂತುಕೊಂಡಿದ್ದಾರೆ. ಇದರ ಮದ್ಯೆ ಅಂಗಡಿ ಬಾಗಿಲಿಗೆ ಮದ್ಯ ಪ್ರಿಯನೊಬ್ಬ ಮಂಗಳಾರತಿ ಮಾಡಿ, ಕಾಯಿ ಒಡೆದು ಪೂಜೆ ಮಾಡಿದ್ದಾನೆ. ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕು ಬೂದಿಕೋಟೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬೂದಿಕೋಟೆ ಗ್ರಾಮದಲ್ಲಿನ ಎಂಎಸ್​ಐಎಲ್​ ಶಾಪ್​ಗೆ ಪೂಜೆ ಮಾಡಿದ್ದಾನೆ. ಇನ್ನು ಬೇತಮಂಗಲದಲ್ಲಿ ಮದ್ಯದ ಅಂಗಡಿಗೆ ಲೈಟಿಂಗ್​ ಹಾಕಿಸಿ ಅಲಂಕಾರ ಮಾಡಿ ಓಪನ್​ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.