thumbnail

ಕೊರೊನಾ ಭೀತಿ: ಕಲಬುರಗಿಯಲ್ಲಿ ರೈಲುಗಳ ಓಡಾಟಕ್ಕೂ ಬ್ರೇಕ್

By

Published : Mar 18, 2020, 10:24 PM IST

ಕಲಬುರಗಿ: ಕೊರೊನಾ ಭೀತಿ ಹಿನ್ನೆಲೆ ರೈಲು ಪ್ರಯಾಣಿಕರ ಸಂಖ್ಯೆ ಗಣನಿಯವಾಗಿ ಇಳಿಮುಖವಾಗಿದೆ. ಈ ಮುಂಚೆ ನಗರದ ರೈಲ್ವೆ ನಿಲ್ದಾಣದಿಂದ ನಿತ್ಯ 20 ಸಾವಿರ ಪ್ರಯಾಣಿಕರು ಪ್ರಯಾಣ ಬೆಳೆಸುತ್ತಿದ್ದರು. ಆದ್ರೆ, ಕೊರೊನಾ ಭೀತಿ ನಂತರ ಪ್ರಯಾಣಿಕರ ಸಂಖ್ಯೆ 10 ಸಾವಿರಕ್ಕೆ ಇಳಿಕೆಯಾಗಿದೆ. ಅಲ್ಲದೆ ಕೆಲ ರೈಲುಗಳ ಓಡಾಟಕ್ಕೂ ಬ್ರೇಕ್ ಹಾಕಲಾಗಿದೆ. ಕಲಬುರಗಿ- ಹೈದರಾಬಾದ್ ಇಂಟರ್ ಸಿಟಿ, ರಾಯಚೂರು- ವಿಜಯಪುರ ಪ್ಯಾಸೆಂಜರ್​​, ಸೋಲಾಪೂರ ಸಿಕಂದ್ರಾಬಾದ್ ರೈಲುಗಳನ್ನು ಮಾರ್ಚ್ 31 ರ ವರೆಗೆ ಓಡಿಸದಿರಲು ರೈಲ್ವೆ ಇಲಾಖೆ ನಿರ್ಧಾರ ಕೈಗೊಂಡಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.