ETV Bharat / state

ಜಾತಿಗಣತಿ ಬಗ್ಗೆ ಸಚಿವ ಸಂಪುಟ ಸಭೆ ಮಾಡಿ ತೀರ್ಮಾನ: ಸಚಿವ ಜಿ. ಪರಮೇಶ್ವರ್​ - G Parameshwar

ಜಾತಿಗಣತಿ ಕುರಿತು ಕ್ಯಾಬಿನೆಟ್​ನ​ಲ್ಲಿ ಚರ್ಚೆ ಮಾಡಿ ಅಸೆಂಬ್ಲಿಗೆ ತರಬೇಕಾ, ಬೇಡವಾ ಎಂದು ತೀರ್ಮಾನ ಮಾಡುತ್ತೇವೆ ಎಂದು ಸಚಿವ ಜಿ. ಪರಮೇಶ್ವರ್​ ತಿಳಿಸಿದರು.

ಸಚಿವ ಜಿ.ಪರಮೇಶ್ವರ್​
ಸಚಿವ ಜಿ.ಪರಮೇಶ್ವರ್​ (ETV Bharat)
author img

By ETV Bharat Karnataka Team

Published : Oct 6, 2024, 4:32 PM IST

ಬೆಂಗಳೂರು: ರಾಜ್ಯದ ಜನಗಣತಿ ವರದಿಯನ್ನು ಕ್ಯಾಬಿನೆಟ್ ಸಭೆ ಮುಂದೆ ತಂದು ತೀರ್ಮಾನಿಸುತ್ತೇವೆ ಎಂದು ಗೃಹ ಸಚಿವ ಡಾ .ಜಿ ಪರಮೇಶ್ವರ್ ತಿಳಿಸಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿ ಸ್ವೀಕಾರ ವಿಚಾರವಾಗಿ ಪ್ರತಿಕ್ರಿಯಿಸಿ, ಇದೊಂದು ವಿಚಿತ್ರ ಸಂದರ್ಭ. ಜಾತಿ ಜನಗಣತಿ ಸ್ವೀಕಾರ ಮಾಡಿಲ್ಲ ಅಂದ್ರೆ ಮಾಡಿಲ್ಲ ಅಂತಾರೆ. ಮಾಡಿದರೆ ಯಾಕೆ ಈಗ ಮಾಡುತ್ತೀರಿ ಅಂತ ವ್ಯಾಖ್ಯಾನ ಮಾಡ್ತಾರೆ. ಜನಗಣತಿ ಸ್ವೀಕಾರ ವಿಳಂಬಕ್ಕೂ ಕಾರಣಗಳಿವೆ.‌ ಕ್ಯಾಬಿನೆಟ್​ನ​ಲ್ಲಿ ಚರ್ಚೆ ಮಾಡಿ ಅಸೆಂಬ್ಲಿಗೆ ತರಬೇಕಾ, ಬೇಡವಾ ಎಂದು ತೀರ್ಮಾನಿಸುತ್ತೇವೆ. ಅಸೆಂಬ್ಲಿಗೆ ಬೇಕಾಗಿಲ್ಲ ಅಂತ ಕ್ಯಾಬಿನೆಟ್ ತೀರ್ಮಾನ ಮಾಡಿದರೆ ಮುಗೀತು ಎಂದರು.

ಸಚಿವ ಜಿ. ಪರಮೇಶ್ವರ್​ (ETV Bharat)

ಕೇಂದ್ರ ಜನಗಣತಿ ಕೂಡ ಆಗಲಿ. ಓವರ್ ಲ್ಯಾಪ್ ಆಗಿದ್ದರೆ ಮುಂದೆ ಸರಿಪಡಿಸಿಕೊಳ್ಳಬಹುದು. ಯಾವುದಾದರೂ ಸಮುದಾಯದ ಅಂಕಿ ಸಂಖ್ಯೆ ಹೆಚ್ಚು ಕಮ್ಮಿ ಆಗಿದ್ದರೆ ಆಮೇಲೆ ಸರಿ ಮಾಡಿಕೊಳ್ಳಬಹುದು. ಯಾವಾಗಲೂ ಕೇಂದ್ರ ಸರ್ಕಾರದ ಜನಗಣತಿಯನ್ನೇ ಎಲ್ಲರೂ ಪರಿಗಣಿಸುತ್ತಾರೆ, ಉಪಯೋಗಿಸುತ್ತಾರೆ. ಒಂದು ಸಾರಿ ಕ್ಯಾಬಿನೆಟ್​ಗೆ ಬಂದು ಚರ್ಚೆಯಾಗಲಿ, ಆಮೇಲೆ ನೋಡೋಣ. ರಾಜ್ಯ ಸರ್ಕಾರ 160 ಕೋಟಿ ರೂಪಾಯಿ ಖರ್ಚು ಮಾಡಿದೆ. ಅದಕ್ಕೂ ಲೆಕ್ಕ‌ ಕೊಡಬೇಕು. ನಾಳೆ ಸಿಎಜಿ ಕೂಡ ಇದಕ್ಕೆ ಆಕ್ಷೇಪ ಮಾಡಬಹುದು ಎಂದು ಪರಮೇಶ್ವರ್​ ಹೇಳಿದರು.

ಹೈಕಮಾಂಡ್ ರಾಜ್ಯದ ಪ್ರತಿ ಬೆಳವಣಿಗೆ ಬಗ್ಗೆ ಮಾಹಿತಿ ಪಡೆಯುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಅಧ್ಯಕ್ಷರಿಗೆ ಎಐಸಿಸಿ ನಾಯಕರಿಗೆ ನೇರ ಸಂಪರ್ಕ ಇರುತ್ತದೆ. ಹೈಕಮಾಂಡ್ ಮಾಹಿತಿ ಕಲೆ ಹಾಕುತ್ತಿರಬಹುದು. ಸರ್ಕಾರ ಯಾವ ರೀತಿ ನಡೆಯುತ್ತಿದೆ ಎಂಬುದರ ಮಾಹಿತಿ ಪಡೆಯುತ್ತಿರುತ್ತದೆ. ಗೃಹ ಸಚಿವನಾಗಿ ನನಗೂ ಮಾಹಿತಿ ಬರುತ್ತದೆ. ರಹಸ್ಯವಾಗಿ ಯಾರೂ ಏನೂ ಮಾಡುತ್ತಿಲ್ಲ. ರಾಜಕೀಯವಾಗಿ ಯಾವುದೇ ಗುಂಪುಗಾರಿಕೆ ಆಗ್ತಾ ಇಲ್ಲ. ನಾನು ಮಹದೇವಪ್ಪ ಮನೆಗೆ ಹೋಗಿದ್ದೆ. ರಹಸ್ಯವಾದ ಚರ್ಚೆ ಮಾಡುವಂಥದ್ದು ಏನೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಅಹಿಂದ ನಾಯಕ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಟಾರ್ಗೆಟ್ ವಿಚಾರವಾಗಿ ಮಾತನಾಡಿ, ಸಿದ್ದರಾಮಯ್ಯಗೆ ಕೆಲವೊಂದು ಮಾಹಿತಿ ಇದೆ, ಅದಕ್ಕಾಗಿ ಹೀಗೆ ಹೇಳಿರಬಹುದು. ಸಿದ್ದರಾಮಯ್ಯ ಹೇಳಿದ್ದರಲ್ಲಿ ತಪ್ಪು ಏನಿದೆ?. ಸಮಾಜ ಯಾವ ರೀತಿ ನಡೆದುಕೊಳ್ಳುತ್ತಿದೆ ಅನ್ನೋದನ್ನು ನೋಡುತ್ತಿದ್ದೇವೆ. ಅದನ್ನು ಗಮನಿಸಿಯೇ ಸಿದ್ದರಾಮಯ್ಯ ಹೇಳಿರಬಹುದು ಎಂದರು.

ಮಾಜಿ ಶಾಸಕ ಮೊಯಿದ್ದಿನ್ ಬಾವ ಸಹೋದರ ಮಿಸ್ಸಿಂಗ್ ವಿಚಾರವಾಗಿ ಪ್ರತಿಕ್ರಿಯಿಸಿ, ಅವರ ಕಾರು ಸಿಕ್ಕಿದೆ. ಅವರೇ ತಪ್ಪಿಸಿಕೊಂಡಿದ್ದಾರಾ?. ಅಪಘಾತ ಆಗಿದೆಯಾ, ಅದರಲ್ಲಿ ಏನಾದ್ರೂ ಇವರದ್ದೇ ತಪ್ಪು ಅಂತಾಗಿದೆಯಾ ಏನೂ ಗೊತ್ತಿಲ್ಲ. ಪೊಲೀಸರ ಟೀಂ ಮಾಡಿದ್ದೇವೆ, ಹುಡುಕುತ್ತಿದ್ದಾರೆ ಎಂದು ತಿಳಿಸಿದರು.

ತನ್ನ ಸರ್ಕಾರದ ಅಭಿವೃದ್ಧಿಯೇ ಉತ್ತಮವಾಗಿತ್ತು ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿ, 14 ತಿಂಗಳ ಆಡಳಿತದಲ್ಲಿ ನಾನೂ ಅವರ ಜೊತೆಗೇ ಇದ್ದೆ. ಕ್ರೆಡಿಟ್ಟು, ಡಿಸ್ಕ್ರೆಡಿಟ್ಟು ಎರಡೂ ನಮಗೂ ಸೇರಬೇಕು. ಒಂದು ಕಂಪ್ಯಾರಿಟಿವ್ ಸ್ಟಡಿ ಮಾಡೋಣ ಎಂದು ಹೇಳಿದರು.

ಇದನ್ನೂ ಓದಿ: ಸಿದ್ದರಾಮಯ್ಯ ತಮ್ಮ ಕೇಸ್​ನ್ನು ಮತ್ತೊಬ್ಬರ ಕೇಸ್ ಜೊತೆ ಟೈಅಪ್​ ಮಾಡಬಾರದು : ಜಗದೀಶ ಶೆಟ್ಟರ್ - MP Jagadish Shettar

ETV Bharat Logo

Copyright © 2024 Ushodaya Enterprises Pvt. Ltd., All Rights Reserved.