ಕೊರೊನಾ ತಡೆಗಟ್ಟಲು ಮತ್ತೆ ಲಾಕ್ಡೌನ್ ಅವಶ್ಯ: ಹುಬ್ಬಳ್ಳಿ ಮಂದಿ ಅಭಿಮತ - ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು
🎬 Watch Now: Feature Video
ಹುಬ್ಬಳ್ಳಿ: ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ರಾಜ್ಯ ಸರ್ಕಾರ ಈಗಿನ ಪರಿಸ್ಥಿತಿಯಲ್ಲಿ ಲಾಕ್ಡೌನ್ ಮಾಡುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ. ದಿನದಿಂದ ದಿನಕ್ಕೆ ಕೊರೊನಾ ಸಿಟಿ ಅಷ್ಟೇ ಅಲ್ಲದೆ ಹಳ್ಳಿಗಳಿಗೂ ಒಕ್ಕರಿಸಿದ ಪರಿಣಾಮ ಜನರು ಭಯಬೀತರಾಗಿದ್ದಾರೆ. ಈಗ ಲಾಕ್ಡೌನ್ ಜಾರಿಗೆ ತಂದರೆ ಕೊರೊನಾದಿಂದ ಮುಕ್ತವಾಗಬಹುದು. ಇಲ್ಲವಾದರೆ ಮುಂದೆ ಬಹಳ ಸಂಕಷ್ಟ ಎದರಾಗುತ್ತದೆ ಎನ್ನುತ್ತಾರೆ ಹುಬ್ಬಳ್ಳಿ ಜನತೆ. ಕೆಲವರು ಕೊರೊನಾ ವಿರುದ್ಧ ಹೋರಾಟಕ್ಕೆ ಲಾಕ್ಡೌನ್ ಒಂದೇ ಅಸ್ತ್ರವಲ್ಲ, ದೇಶದ ಆರ್ಥಿಕ ಸ್ಥಿತಿ ತುಂಬಾ ಹದಗೆಟ್ಟಿದೆ. ಸಾರ್ವಜನಿಕರು ಸಹ ಕೊರೊನಾ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.