ಸಂಸದ ಡಿ ಕೆ ಸುರೇಶ್ರಿಂದ ಕೊರೊನಾ ಜಾಗೃತಿ - DK Suresh
🎬 Watch Now: Feature Video
ರಾಮನಗರ: ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿರುವ ಕೊರೊನಾ ಹೆಮ್ಮಾರಿಯ ಬಗ್ಗೆ ಕೆಲ ಮಾಹಿತಿಗಳನ್ನು ಸಂಸದ ಡಿ. ಕೆ. ಸುರೆಶ್ ಹಂಚಿಕೊಂಡಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿರುವ ಅವರು, ನಮ್ಮ ಸುತ್ತಲೂ ದಿನಕ್ಕೆ ನೂರಾರು ಮಂದಿ ಮೃತಪಡುತ್ತಿರುವ ದಾರುಣ ವ್ಯವಸ್ಥೆಯನ್ನು ಮನಗಂಡು ಅನಿವಾರ್ಯವಾಗಿ ಇದನ್ನು ಹಂಚಿಕೊಳ್ಳಲೇಬೇಕಾಗಿದೆ. ಇಂತಹ ಭೀಕರ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬ ನಾಗರಿಕರೂ ಈ ಸಲಹೆಗಳನ್ನು ಸೂಕ್ತವಾಗಿ ತೆಗೆದುಕೊಂಡು ಸೋಂಕು ಮುಕ್ತ ಸಮಾಜ ಕಟ್ಟೋಣ ಎಂದು ಕರೆ ನೀಡಿದ್ದಾರೆ.