ಶ್ರೀಗಳ ಅಗಲಿಕೆಗೆ ಸಂತಾಪ ಸೂಚಿಸಿದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಹಾಗೂ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀ - condolences on the death of shri latest news

🎬 Watch Now: Feature Video

thumbnail

By

Published : Dec 29, 2019, 6:14 PM IST

ಶ್ರೀಗಳ ಅಗಲಿಕೆಗೆ ಹರಿಹರದ ರಾಜನಹಳ್ಳಿಯಲ್ಲಿರುವ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನಾನಂದಪುರಿ ಸ್ವಾಮೀಜಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಧಾರ್ಮಿಕ, ಶೈಕ್ಷಣಿಕ ಮತ್ತು ರಾಷ್ಟ್ರಾಭಿಮಾನ ಸಂಸ್ಕೃತಿ ಸಂವರ್ಧನೆಯಲ್ಲಿ ಸ್ವಾಮೀಜಿಯವರ ಪಾತ್ರ ಬಹು ದೊಡ್ಡದು. ಶ್ರೀಗಳ ಆಶಯಗಳು ಸಾಕಾರಗೊಂಡಾಗ ಮಾತ್ರ ಅವರಿಗೆ ನಿಜವಾದ ಸಂತಾಪ ಸಲ್ಲಿಸಿದಾಗೆ ಆಗುತ್ತದೆಯೆಂದರು. ಹಾಗೇಯೇ, ಸಿರಿಗೆರೆ ತರಳಾಬಾಳು ಗುರುಪೀಠದ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ಸಹ ಸಂತಾಪ ಸೂಚಿಸಿದರು‌. ಅವರ ನಿಧನದ ವಾರ್ತೆ ಕೇಳಿ ಮನಸ್ಸಿಗೆ ತುಂಬಾ ನೋವಾಗಿದ್ದು, ಅಖಂಡ ಭಾರತದ ಒಳಿತಿಗಾಗಿ ತಪಸ್ಸು ಮಾಡಿದ ಯತಿವರ್ಯರು ಅವರು ಎಂದು ಬೇಸರ ವ್ಯಕ್ತಪಡಿಸಿದರು. ನಮ್ಮ ಮಠದ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದು, ಅವರ ಅಂತಿಮ ಕ್ರಿಯಾವಿಧಿಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಿದ್ದೇನೆ ಎಂದು ಸಂತಾಪ ಸೂಚಿಸಿದರು.

For All Latest Updates

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.