ಚಾಮರಾಜನಗರ: ಶಾಲಾ ಶೈಕ್ಷಣಿಕ ಪ್ರವಾಸದ ವೇಳೆ ಶಿಕ್ಷಕರೊಬ್ಬರು ತಮ್ಮ ಜವಾಬ್ದಾರಿ ಮರೆತು ಬಸ್ ಚಲಾಯಿಸಿ ಅಮಾನತುಗೊಂಡಿದ್ದಾರೆ. ಯಳಂದೂರು ತಾಲೂಕಿನ ಗುಂಬಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ವೀರಭದ್ರಸ್ವಾಮಿ ಅಮಾನತಾದ ಶಿಕ್ಷಕ.
ಕಳೆದ ತಿಂಗಳು ನೂತನ ವರ್ಷಾಚರಣೆಯ ಸಲುವಾಗಿ ಬೇಲೂರು, ಹಳೇಬೀಡು ಸೇರಿದಂತೆ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ವಿದ್ಯಾರ್ಥಿಗಳನ್ನು ಕರೆದೊಯ್ಯಲಾಗಿತ್ತು. ಆ ವೇಳೆ, ವೀರಭದ್ರಸ್ವಾಮಿ ತಮ್ಮ ಜವಾಬ್ದಾರಿ ಮರೆತು ಬಸ್ ಚಲಾಯಿಸಿದ್ದರು.
ಬಸ್ ಚಲಾಯಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರಿಂದ ಟೀಕೆಗಳು ವ್ಯಕ್ತವಾಗಿದ್ದವು. ಈ ಸಂಬಂಧ ಯಳಂದೂರು ಬಿಇಒ ಅವರು ಡಿಡಿಪಿಐ ರಾಮಚಂದ್ರಾಜೇ ಅರಸ್ ಅವರಿಗೆ ವರದಿ ಕೊಟ್ಟಿದ್ದರು.
ಈ ವರದಿ ಆಧಾರದ ಸಹ ಶಿಕ್ಷಕ ವೀರಭದ್ರಸ್ವಾಮಿ ಅವರನ್ನು ತಕ್ಷಣವೇ ಜಾರಿಗೆ ಬರುವಂತೆ ಅಮಾನತು ಮಾಡಿ ಆದೇಶಿದ್ದಾರೆ.
''ಇಲಾಖಾ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ'' ಎಂದು ಶಾಲಾ ಶಿಕ್ಷಣ ಇಲಾಖೆಯ ಶಿಸ್ತು ಪ್ರಾಧಿಕಾರಿ ಹಾಗೂ ಉಪನಿರ್ದೇಶಕ ರಾಮಚಂದ್ರ ರಾಜೇ ಅರಸ್ ಅವರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ: ಹಾಸ್ಟೆಲ್ ಕಟ್ಟಡದಿಂದ ಬಿದ್ದು ವಿದ್ಯಾರ್ಥಿ ಸಾವು: ಪ್ರಾಂಶುಪಾಲೆ, ವಾರ್ಡನ್ ಅಮಾನತು - PRINCIPAL WARDEN SUSPEND