ಕೊಚುವೇಲಿ ಎಕ್ಸ್ಪ್ರೆಸ್ ಡೈಲಿ ಸಂಚಾರ ರೈಲು ಮೈಸೂರು ರೈಲ್ವೆ ನಿಲ್ದಾಣಕ್ಕೆ ರೈಲು ವಿಸ್ತರಣೆ - Cochuveli Express Daily Train
🎬 Watch Now: Feature Video
ಮೈಸೂರು: ಕೆಎಸ್ ಆರ್ ಬೆಂಗಳೂರು ನಗರ - ಕೊಚುವೇಲಿ ರೈಲು ಸೇವೆ ಇದೀಗ ಮೈಸೂರಿಗೂ ವಿಸ್ತರಣೆಯಾಗಿದೆ. ಇವತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಸಿರು ನಿಶಾನೆ ತೋರುವ ಮೂಲಕ ರೈಲು ಸೇವೆಗೆ ಚಾಲನೆ ನೀಡಿದರು. ಪ್ರತಿದಿನ ಬೆಳಿಗ್ಗೆ 11:20ಕ್ಕೆ ಮೈಸೂರು ರೈಲ್ವೆ ನಿಲ್ದಾಣಕ್ಕೆ ಆಗಮಿಸಿಲಿರುವ ಈ ರೈಲು 12:50 ಕ್ಕೆ ಮೈಸೂರಿನಿಂದ ಹೊರಟು ಮಧ್ಯಾಹ್ನ 3.35ಕ್ಕೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ ಸಂಜೆ 4:50 ಕ್ಕೆ ಹೊರಟು ರಾತ್ರಿ 9:35 ಕ್ಕೆ ಕೊಚುವೇಲಿಗೆ ತಲುಪಲಿದೆ.