ವೋಟ್ ಗಿಟ್ಟಿಸಲು ಸಿಎಂ ಹೇಳಿರೋ ಮಾತು ಅಕ್ಷಮ್ಯ ಅಪರಾಧ : ವಿಜಯ್ ಅಮೃತರಾಜ್ - ಬಿಎಸ್ ಯಡಿಯೂರಪ್ಪ ಮಾತಿಗೆ ವಿಜಯ್ ಅಮೃತರಾಜ್ ಪ್ರತಿಕ್ರಿಯೆ
🎬 Watch Now: Feature Video

ಕೊಪ್ಪಳ: ಮಹಾರಾಷ್ಟ್ರ ಚುನಾವಣೆ ಪ್ರಚಾರದಲ್ಲಿ ಮತದಾರರನ್ನು ಓಲೈಸಲು ಕರ್ನಾಟಕ ಸಿಎಂ ಬಿಎಸ್ ಯಡಿಯೂರಪ್ಪ ನೀರು ಬಿಡುವ ಚಿಂತನೆ ಮಾಡಿರೋದು ಸರಿಯಲ್ಲ. ನಮ್ಮ ರಾಜ್ಯದ ರೈತರು ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾದ ಸಂದರ್ಭಗಳಿವೆ. ಮಹಾದಾಯಿಗಾಗಿ ನಮ್ಮ ರಾಜ್ಯದ ರೈತರು ನಿರಂತರ ಹೋರಾಟ ಮಾಡಿದ್ದಾರೆ. ಮಹಾರಾಷ್ಟ್ರ ಹಾಗೂ ಕರ್ನಾಟಕದ ನಡುವೆ ನೀರಿನ ವಿವಾದಗಳಿವೆ. ಹೀಗಿರುವಾಗ ಅಲ್ಲಿನ ಚುನಾವಣೆ ಪ್ರಚಾರದಲ್ಲಿ ಬಿಎಸ್ವೈ ತುಬಚಿ-ಬಬಲೇಶ್ವರ ಏತ ನೀರಾವರಿ ನೀರನ್ನು ಬೋರಾ ನದಿಗೆ ಬಿಡುವ ವಿಚಾರ ಮಾಡಿದ್ದಾರೆ. ಅಲ್ಲಿನ ಜನರ ವೋಟ್ ಗಿಟ್ಟಿಸಲು ಈ ರೀತಿ ಹೇಳಿಕೆ ನೀಡಿರುವುದು ಅಕ್ಷಮ್ಯ ಅಪರಾಧ ಎಂದು ಕೊಪ್ಪಳದ ಸಾಹಿತಿ ಹಾಗೂ ನ್ಯಾಯವಾದಿ ವಿಜಯ್ ಅಮೃತರಾಜ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.