ಬೆಂಗಳೂರಿನಲ್ಲಿ ಸಿಎಂ ಸಿಟಿ ರೌಂಡ್ಸ್: ಬಿಸಿಲಲ್ಲಿ ಟ್ರಾಫಿಕ್ ಜಾಮ್ಗೆ ಬೇಸತ್ತ ಸಾರ್ವಜನಿಕರ ಆಕ್ರೋಶ - Traffic jam in Bangalore
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10435704-thumbnail-3x2-vish.jpg)
ಬೆಂಗಳೂರು: ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಸಿಎಂ ತಪಾಸಣೆ ನಡೆಸುವ ವೇಳೆ ಝೀರೋ ಟ್ರಾಫಿಕ್ ಮಾಡಿದ್ದರಿಂದ ನಗರದ ಹಲವೆಡೆ ಸಾರ್ವಜನಿಕರಿಗೆ ಟ್ರಾಫಿಕ್ ಜಾಮ್ ಬಿಸಿ ತಟ್ಟಿತು. ಸಿಟಿ ರೌಂಡ್ಸ್ ಮಧ್ಯೆ ಸಿಎಂ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿ ಕೋಶಿಶ್ ರೆಸ್ಟೋರೆಂಟ್ಗೆ ಸಚಿವರ ಜೊತೆ ಕಾಫಿಗೆ ತೆರಳಿದರು. ಈ ವೇಳೆ ಇಡೀ ಸೇಂಟ್ಮಾರ್ಕ್ಸ್ ರಸ್ತೆಗೆ ವಾಹನಗಳು ಬರದಂತೆ ತಡೆಹಿಡಿಯಲಾಗಿತ್ತು. 15 ನಿಮಿಷಗಳ ಬಳಿಕ ಒಂದು ಮಾರ್ಗದಲ್ಲಿ ಸಂಚಾರಕ್ಕೆ ಪೋಲಿಸರು ಅನುವು ಮಾಡಿಕೊಟ್ಟರು. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಹಿಡಿಶಾಪ ಹಾಕಿದರು. ದ್ವಿಚಕ್ರ ವಾಹನ ಸವಾರರೊಬ್ಬರು ಆಕ್ರೋಶಗೊಂಡು ಜನರಿಗೆ ಎಷ್ಟು ತೊಂದರೆ ಆಗಿದೆ. 11-45ರಿಂದ 12-45ರವರೆಗೆ ರಸ್ತೆಯಲ್ಲಿ ಬಿಸಿಲಲ್ಲೇ ಕಾದಿದ್ದೇವೆ. ರಾಜಕಾರಣಿಗಳು ಪ್ರೋಗ್ರಾಮ್ ಮಾಡುತ್ತಾ ಕೂತಿದ್ದಾರೆ. ಪಬ್ಲಿಕ್ಗೆ ಆಗಿರುವ ಸಮಸ್ಯೆಗೆ ಯಾರು ಹೊಣೆ ಎಂದು ಅಸಮಾಧಾನ ಹೊರಹಾಕಿದರು.