ಮಕ್ಕಳಂತೆ ಆಟವಾಡಿ ಸಂಭ್ರಮಿಸಿದ ಪೌರಕಾರ್ಮಿಕರು - ಮುದ್ದೇಬಿಹಾಳ
🎬 Watch Now: Feature Video
ಮುದ್ದೇಬಿಹಾಳ: ಕಸ ಗೂಡಿಸಿ, ಚರಂಡಿ ಸ್ವಚ್ಛಗೊಳಿಸಿ ಆರೋಗ್ಯಕ್ಕೆ ತಮ್ಮದೇಯಾದ ಕೊಡುಗೆ ನೀಡುವ ಪೌರಕಾರ್ಮಿಕರು ಮಕ್ಕಳಂತೆ ಆಟವಾಡಿ ಸಂಭ್ರಮಿಸಿದರು. ಪೌರಕಾರ್ಮಿಕರ ದಿನಾಚರಣೆ ಹಿನ್ನೆಲೆ ಪಟ್ಟಣದ ಕೆಬಿಎಂಪಿಎಸ್ ಶಾಲೆಯ ಆವರಣದಲ್ಲಿ ಪುರಸಭೆಯ ಮುಖ್ಯಾಧಿಕಾರಿ ಗೋಪಾಲ ಕಾಸೆ ಮಾರ್ಗದರ್ಶನದಲ್ಲಿ ಸ್ವಚ್ಛತಾ ವಿಭಾಗದ ನೌಕರರಾದ ಮಹಾಂತೇಶ ಕಟ್ಟೀಮನಿ, ಬಸವರಾಜ ಬಿರಾದಾರ, ಜಾವೇದ ನಾಯ್ಕೋಡಿ ಪುರಸಭೆಯ ಪೌರಕಾರ್ಮಿಕರಿಗಾಗಿ ಕೆಲವೊಂದು ಮನರಂಜನಾ ಆಟಗಳನ್ನು ಏರ್ಪಡಿಸಿ ಪೌರಕಾರ್ಮಿಕರು ಖುಷಿಯಿಂದ ಕಾಲ ಕಳೆಯುವಂತೆ ಮಾಡಿದರು.