ಸರಿ ದಾರಿಯಲ್ಲಿ ನಡೀತಿವಿ ಅಂದ್ರೆ ಸರಿ..ಇಲ್ಲಾ ಅಂದ್ರೆ ನಾವು ಸಮ್ನಿರಲ್ಲ: ರೌಡಿಗಳಿಗೆ ಎಸ್ಪಿ ಖಡಕ್ ವಾರ್ನಿಂಗ್ - Chitradurga SP Warning to Rowdies
🎬 Watch Now: Feature Video
ಚಿತ್ರದುರ್ಗ: ಒಳ್ಳೆತನದಿಂದ ಇದ್ದು, ಸರಿ ದಾರಿಯಲ್ಲಿ ನಡೀತಿವಿ ಅಂದ್ರೆ ನಮ್ಮ ಸಪೋರ್ಟ್ ಇರುತ್ತೆ. ಮತ್ತೆ ಬಾಲ ಬಿಚ್ಚಿ ಹಳೆ ಕಸುಬನ್ನು ಮುಂದವರೆಸಿದ್ರೆ, ನಾವು ಮಾತ್ರ ನಿಮ್ಮನ್ನು ಬಿಡಲ್ಲ ಎಂದು ಜಿಲ್ಲಾ ನೂತನ ಎಸ್ಪಿ ಜಿ.ರಾಧಿಕಾ ರೌಡಿಗಳಿಗೆ ಖಡಕ್ ವಾರ್ನಿಂಗ್ ಮಾಡಿದ್ದಾರೆ. ನಗರದ ಡಿ.ಆರ್ ಗ್ರೌಂಡ್ನಲ್ಲಿ ಹಮ್ಮಿಕೊಂಡಿದ್ದ ರೌಡಿಗಳ ಪರೇಡ್ನಲ್ಲಿ ಭಾಗವಹಿಸಿ ರೌಡಿಗಳ ಬಗ್ಗೆ ಮಾಹಿತಿ ಪಡೆದ ಅವರು, ಸರಿ ದಾರಿಯಲ್ಲಿ ನಡೆಯಿರಿ ನಾವು ಸದಾ ನಿಮ್ಮೊಂದಿಗೆ ಇರ್ತೀವಿ. ಕಷ್ಟಪಟ್ಟು ದುಡಿದು ತಮ್ಮ ಜೀವನವನ್ನು ಕಟ್ಟಿಕೊಳ್ಳಿ ಅದನ್ನು ಬಿಟ್ಟು ಅಡ್ಡ ದಾರಿಯನ್ನು ಹಿಡಿಯಬೇಡಿ ಎಂದು ರೌಡಿಗಳಿಗೆ ಕಿವಿ ಮಾತು ಹೇಳಿದ್ರು.