ಸಾಂತ್ವನ ಕೇಂದ್ರದಲ್ಲಿ ನೋವು ಮರೆತು ಭಜನೆ ಮಾಡಿದ ಮಕ್ಕಳು - ಮಳೆಯಿಂದ ಮುಳುಗಡೆ
🎬 Watch Now: Feature Video
ಬೆಳಗಾವಿ: ನಿರಂತರವಾಗಿ ಸುರಿದ ಮಳೆಯಿಂದ ಮುಳುಗಡೆಯಾಗಿ ಸಾಂತ್ವನ ಕೇಂದ್ರ ಸೇರಿಕೊಂಡಿರುವ ಸಾವಿರಾರು ಜನರ ನೋವು ಕಡಿಮೆಯಾಗಿಲ್ಲ. ನಗರದ ಸಾಯಿ ಭವನದಲ್ಲಿ ಮಕ್ಕಳು ರಾಮ ಭಜನೆ ಮಾಡುವ ಮುಖಾಂತರ ಮನೆ ಕಳೆದುಕೊಂಡ ನೋವು ಮರೆಯುವ ಪ್ರಯತ್ನ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಅನೇಕ ತಾಲೂಕುಗಳು ಪ್ರವಾಹಕ್ಕೆ ಒಳಗಾಗಿವೆ. ಸಾವಿರಾರು ಜನರು ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಇನ್ನೂ ಮಹಿಳೆಯರು ಮಕ್ಕಳ ಪರಿಸ್ಥಿತಿ ಹೇಳತೀರದು. ಮಕ್ಕಳು ತಮ್ಮ ಮನೆ ಬಿಟ್ಟು ಸಾಂತ್ವನ ಕೇಂದ್ರದಲ್ಲಿ ಉಳಿದುಕೊಂಡಿದ್ದು ತಮ್ಮಲ್ಲಿಯ ನೋವು ಮರೆಯುವ ಸಲುವಾಗಿ ಭಜನೆ ಮಾಡಿದ್ದು ವಿಶೇಷವಾಗಿತ್ತು.