ನಾಡಿಗೆ ಬಂದ ಚಿರತೆ ವ್ಯಕ್ತಿಯನ್ನು ನೋಡಿ ಪರಾರಿ! ವಿಡಿಯೋ - Madduru News
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8831450-thumbnail-3x2-mng.jpg)
ಮಂಡ್ಯ: ರಾತ್ರಿ ಮನೆಯ ಆವರಣದಲ್ಲಿ ಮಾತನಾಡುತ್ತಾ ನಿಂತಿದ್ದ ವೇಳೆ ದಾಳಿ ಮಾಡಲು ಮೆಲ್ಲನೆ ಬಂದಿದ್ದ ಚಿರತೆಯು ಆ ವ್ಯಕ್ತಿಯನ್ನು ನೋಡುತ್ತಿದ್ದಂತೆ ಹಿಂದಕ್ಕೆ ಓಡಿ ಹೋಗಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆ ಮದ್ದೂರು ತಾಲೂಕಿನ ಅರೆತಿಪ್ಪೂರು ಗ್ರಾಮದಲ್ಲಿ ತಡರಾತ್ರಿ ನಡೆದಿದೆ. ಮನೆ ಬಳಿಗೆ ಚಿರತೆ ಬಂದಿದ್ದ ಸುದ್ದಿ ತಿಳಿದು ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಚಿರತೆ ಸೆರೆಗೆ ಮನವಿ ಮಾಡಿದ್ದಾರೆ.