ಕೊರೊನಾ ಭೀತಿ: ಸರಳವಾಗಿ ಜರುಗಿದ ಬಾಳೆಹೊಳೆ ಚನ್ನಕೇಶವ ಜಾತ್ರೆ - chikkamagalur district news
🎬 Watch Now: Feature Video

ಚಿಕ್ಕಮಗಳೂರು: ಕೊರೊನಾ ಕಾರಣದಿಂದಾಗಿ ಮೂಡಿಗೆರೆ ತಾಲೂಕಿನ ಬಾಳೆಹೊಳೆಯ ಭದ್ರಾ ನದಿಯ ತಟದಲ್ಲಿರುವ ಪುರಾಣ ಪ್ರಸಿದ್ಧ ಬಾಳೆಹೊಳೆ ಶ್ರೀಚನ್ನಕೇಶವ ದೇವಾಲಯದಲ್ಲಿ ವರ್ಷಾವಧಿ ಜಾತ್ರೆಯು ಸರಳವಾಗಿ ನೆರವೇರಿತು. ದೇವರ ವಿಗ್ರಹವನ್ನು ಹೊತ್ತು ಮಂಗಳ ವಾದ್ಯ, ಛತ್ರಿ ಚಾಮರಗಳೊಂದಿಗೆ ಸುತ್ತು ಸೇವೆ ನಡೆಸಲಾಯಿತು. ನಂತರ ರಥೋತ್ಸವ ನಡೆಸಲಾಯಿತು. ಈ ಸಮಯದಲ್ಲಿ ಭಕ್ತಾಧಿಗಳು ತಮ್ಮ ಹರಕೆ ತೀರಿಸಿದರು.