ಚಾಮರಾಜನಗರ ಅರಣ್ಯ ಪ್ರದೇಶ ವೈವಿಧ್ಯತೆಯ ತವರು: ಮನೋಜ್ ಕುಮಾರ್ - Number of tiger increased in reserve forest of chamarajanagara
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9914423-569-9914423-1608214563563.jpg)
ರಾಜ್ಯದ ವಿವಿಧ ಭಾಗದಲ್ಲಿ ಕಾಣಸಿಗುವ ಹಲವು ವಿಧದ ಪ್ರಾಣಿಗಳು ಚಾಮರಾಜನಗರ ಹುಲಿ ಕಾಡು ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಇವೆ. ಇದು ನಾಲ್ಕಾರು ವಿಧದ ವಾತಾವರಣ ಒಳಗೊಂಡಿದೆ. ಕುರುಚಲು ಕಾಡು, ನಿತ್ಯ ಹರಿದ್ವರ್ಣ, ಶೋಲಾ ಅರಣ್ಯ ಸೇರಿದಂತೆ ಹಲವು ವಿಧದಕಾಡು ಇಲ್ಲಿದೆ. ವನ್ಯಜೀವಿ ಹಾಗೂ ಉತ್ತಮ ಅರಣ್ಯ ಸಂಪತ್ತು ಶ್ರೀಮಂತವಾಗಿರುವ ತಾಣ ಇದಾಗಿದೆ. ತಮಿಳುನಾಡಿನ ಸತ್ಯಮಂಗಲ ಕಾಡು, ಪಕ್ಕದ ಬಂಡಿಪುರ ಭಾಗದಲ್ಲೂ ಹೆಚ್ಚಿನ ರಕ್ಷಣೆ ಸಿಕ್ಕರೆ ಬಿಆರ್ಟಿ ಅರಣ್ಯಕ್ಕೆ ಸಹಜವಾಗಿ ಪ್ರಾಣಿಗಳು ಆಗಮಿಸಿ ಇಲ್ಲಿನ ವೈಶಿಷ್ಟ್ಯ ಹೆಚ್ಚಿಸಲಿವೆ. ಲಂಟನಾ (ಚದರಂಗಿ) ಗಿಡಗಳು ಶೇ.80 ರಷ್ಟು ಅರಣ್ಯ ವ್ಯಾಪಿಸಿದ್ದು, ಇದರ ನಿವಾರಣೆಗೂ ಕ್ರಮ ಕೈಗೊಂಡಿದ್ದೇವೆ. ಇಲ್ಲಿನ ಗುಡ್ಡಗಾಡು ನಿವಾಸಿಗಳಿಗೂ ಬದುಕಿನ ಆಸರೆ ಕಲ್ಪಿಸಿದ್ದೇವೆ ಎಂದು ಚಾಮರಾಜನಗರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ಅವರು ಈಟಿವಿ ಭಾರತ್ ಪ್ರತಿನಿಧಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.