ವಿಜಯಪುರದಲ್ಲಿ ದಸರಾ ಸಂಭ್ರಮ... ಕಳೆಕಟ್ಟಿದ ಹಬ್ಬದ ಸಡಗರ - ಆಯುಧ ಪೂಜೆ
🎬 Watch Now: Feature Video
ವಿಜಯಪುರ: ಬಿಸಿಲು ನಾಡಿನ ಜಿಲ್ಲೆಯ ಜನರು ನವರಾತ್ರಿ ಹಬ್ಬವನ್ನು ಸಡಗರದಿಂದ ಆಚರಿಸುತ್ತಿದ್ದಾರೆ. ಇನ್ನು ಹಬ್ಬದ ಪೂಜೆಗೆ ಬೇಕಾದ ಸಾಮಗ್ರಿ, ಬಾಳೆ ಗಿಡ, ರಂಗೋಲಿ, ಬನ್ನಿ, ಕಬ್ಬು, ಕುಂಬಳಕಾಯಿ, ಹೂವಿನ ಹಾರದ ಬೆಲೆಯಲ್ಲಿ ಏರಿಕೆ ಕಂಡರೂ ಸಹ ಸುಡು ಬಿಸಿಲಿನಲ್ಲಿ ಖರೀದಿಸುವ ದೃಶ್ಯಗಳು ಕಂಡುಬಂದವು. ಇನ್ನು ಹಬ್ಬದ ನಿಮಿತ್ತವಾಗಿ ಜನರು ನಗರದ ಮಹಾಲಕ್ಷ್ಮಿ ದೇವಸ್ಥಾನ, ಸಿದ್ದೇಶ್ವರ ಮಂದಿರಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಅರ್ಚಕರಿಂದ ತಮ್ಮ ವಾಹನಗಳನ್ನು ಪೂಜೆ ಮಾಡಿಸಿ ನವರಾತ್ರಿ ಹಬ್ಬವನ್ನು ಆಚರಿಸಿದರು.