ಹೇರ್ ಕಟ್ ಮಾಡಿಸಲು ಹೋಗುತ್ತಿದ್ದ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆ... ಭೀಕರ ದೃಶ್ಯಗಳು ಸೆರೆ - Hibli latest murder news
🎬 Watch Now: Feature Video
ಹಾಡುಹಗಲೇ ಚಾಕುವಿನಿಂದ ಇರಿದು ರಮೇಶ ಭಾಂಡಗೆ ಎಂಬ ವ್ಯಕ್ತಿಯನ್ನು ಕೊಲೆ ಮಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಇಂದು ಹುಬ್ಬಳ್ಳಿ ನಗರದ ಬಾಬಾಸಾನ್ ಗಲ್ಲಿಯಲ್ಲಿ ಹೇರ್ ಕಟ್ ಮಾಡಿಸಿಕೊಳ್ಳಲು ಹೋಗುತ್ತಿರುವಾಗ ವ್ಯಕ್ತಿಯೊಬ್ಬ ಏಕಾಏಕಿ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಇದಕ್ಕೆ ರಮೇಶ ಭಾಂಡಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಪರಿಚಿತ ವ್ಯಕ್ತಿ ಹೊಟ್ಟೆ ಹಾಗೂ ಬೆನ್ನಿಗೆ ಚಾಕುವಿನಿಂದ ಇರಿದ್ದಾನೆ. ಚಾಕು ಇರಿತಕೊಳ್ಳಗಾದ ರಮೇಶ ಭಾಂಡೆಗೆ ಮತ್ತೆ ಅಲ್ಲಲ್ಲಿ ಓಡಾಡಿದ್ದಾನೆ. ಬಳಿಕ ತೀವ್ರವಾಗಿ ನಿತ್ರಾಣಗೊಂಡು ಅಲ್ಲಿಯೇ ಕುಳಿತ್ತಿದ್ದಾನೆ. ಬಳಿಕ ಸ್ಥಳೀಯರು ಈತನನ್ನು ಆಟೋದಲ್ಲಿ ಕಿಮ್ಸ್ಗೆ ಕರೆದೊಯ್ಯುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾನೆ. ಆದ್ರೆ ಚಾಕುವಿನಿಂದ ಇರಿದ ದೃಶ್ಯಗಳಲ್ಲಿ ಕೊಲೆ ಆರೋಪಿಯ ಸಂಪೂರ್ಣ ದೃಶ್ಯಗಳು ಸೆರೆಯಾಗಿದ್ದು, ಕೊಲೆ ಮಾಡಿದ ಆರೋಪಿ ಪರಿಚಯಸ್ಥ ಎನ್ನಲಾಗಿದ್ದು, ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.