ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಬಿಡಾಡಿ ದನಗಳ ಹಾವಳಿ... ವಾಹನ ಸವಾರರಿಗೆ ಭೀತಿ - ಕೊಪ್ಪಳ
🎬 Watch Now: Feature Video
ಕೊಪ್ಪಳ: ನಗರದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ವಾಹನಗಳ ಸವಾರರು ದಿನವೂ ಭೀತಿಯಲ್ಲೇ ಸಂಚರಿಸುವಂತಾಗಿದೆ. ನಗರದ ಪ್ರಮುಖ ರಸ್ತೆಯಾದ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಬಿಡಾಡಿ ದನಗಳು ಗುಂಪು ಗುಂಪಾಗಿ ರಸ್ತೆಯಲ್ಲಿಯೇ ಅಡ್ಡಾದಿಡ್ಡಿಯಾಗಿ ಓಡಾಡುತ್ತಿವೆ. ನಗರದ ಬಸ್ ನಿಲ್ದಾಣದ ಬಳಿಯಿಂದ ಬಸವೇಶ್ವರ ಸರ್ಕಲ್ ವರೆಗಿನ ರಸ್ತೆಯಲ್ಲಿ ಹಾಗೂ ಜವಾಹರ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯ ಬಿಡಾಡಿ ದನಗಳು ಓಡಾಡುತ್ತಿರುತ್ತವೆ. ದನಗಳು ರಸ್ತೆಯಲ್ಲಿಯೇ ಓಡಾಡೋದು ಹಾಗೂ ಮಲಗುವುದರಿಂದ ವಾಹನ ಸವಾರರು ಆತಂಕದಲ್ಲಿದ್ದಾರೆ. ಬಿಡಾಡಿ ದನಗಳ ಹಾವಳಿಯಿಂದ ಈಗಾಗಲೇ ಸಾಕಷ್ಟು ಬಾರಿ ಜನರು ಅಪಘಾತ ಮಾಡಿಕೊಂಡಿದ್ದಾರೆ. ಅಲ್ಲದೆ ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಈ ದನಗಳನ್ನು ಗೋಶಾಲೆಗೆ ಬಿಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.