"ಮಾಸ್ಕ್ ಹಾಕಲ್ಲ, ಏನು ಬೇಕಾದರೂ ಮಾಡಿಕೊಳ್ಳಿ": ಪೊಲೀಸರಿಗೆ ಆವಾಜ್ ಹಾಕಿದ ಕಾರು ಚಾಲಕ - car driver against police in Bangalore latest news
🎬 Watch Now: Feature Video
ಬೆಂಗಳೂರು: ಕೊರೊನಾ ಭೀತಿ ಹೆಚ್ಚಾಗುತ್ತಲೇ ಇದೆ. ಕೋವಿಡ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಉಲ್ಬಣಿಸುತ್ತಿದ್ದು, ಆತಂಕ ತಂದಿದೆ. ಪ್ರಸ್ತುತ ಮಾಸ್ಕ್ ಧರಿಸಿ ಜಾಗರೂಕರಾಗಿರಿ ಎಂದು ಎಷ್ಟೇ ಹೇಳಿದರು ಸಹ ಕೆಲವರು ಇದಕ್ಕೆ ಕಿವಿಗೊಡುತ್ತಿಲ್ಲ. ನಗರದಲ್ಲಿ ಕಾರಿನ ಮಾಲೀಕರಿಗೆ ಮಾಸ್ಕ್ ಧರಿಸಿ ಎಂದು ಹೇಳಿದ್ದಕ್ಕೆ ಪೊಲೀಸರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಪುಲಕೇಶಿನಗರದ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಕರ್ತವ್ಯನಿರತ ಪೊಲೀಸರ ವಿರುದ್ಧ ಕಾರು ಚಾಲಕನೊಬ್ಬ ಹರಿಹಾಯ್ದಿದ್ದಾನೆ. ಮಾಸ್ಕ್ ಹಾಕದಿರುವುದನ್ನು ಪ್ರಶ್ನಿಸಿದ ಕಾನ್ಸ್‌ಸ್ಟೇಬಲ್ ವಿರುದ್ಧವೇ ಕಿಡಿಕಾರಿದ್ದಾನೆ. ದಂಡ ಕಟ್ಟುವಂತೆ ತಾಕೀತು ಮಾಡಿದರೂ ಕಾರಿನಿಂದ ಕೆಳಗಿಳಿದು ಮಾತಿನ ಸಮರದಲ್ಲಿ ದಂಡ ಕಟ್ಟುವುದಿಲ್ಲ, ಏನ್ ಬೇಕಾದರೂ ಮಾಡಿಕೊಳ್ಳಿ ಎಂದು ಏಕವಚನದಲ್ಲಿ ಪೊಲೀಸರಿಗೆ ಆವಾಜ್ ಹಾಕಿದ್ದಾನೆ. ಈ ಘಟನೆಯನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿರುವ ಪೊಲೀಸರು, ರಾಷ್ಟ್ರೀಯ ವಿಕೋಪ ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.