ಕಾಡಿನಿಂದ ನಾಡಿಗೆ ಬಂದು ಆತಂಕ ಸೃಷ್ಟಿಸಿದ ಮುಳ್ಳು ಹಂದಿ ಸೆರೆ - ಕಾಡಿನಿಂದ ನಾಡಿಗೆ ಬಂದು ಆತಂಕ ಸೃಷ್ಟಿಸಿದ್ದ ಮುಳ್ಳು ಹಂದಿ ಸೆರೆ
🎬 Watch Now: Feature Video
ಬೆಳಗಾವಿ: ಕಾಡಿನಿಂದ ನಾಡಿಗೆ ಬಂದು ಆತಂಕ ಸೃಷ್ಟಿಸಿದ್ದ ಮುಳ್ಳು ಹಂದಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿ ಬಳಿಕ ಖಾನಾಪೂರ ಭೀಮಗಢ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಗಿದೆ. ಇಲ್ಲಿನ ಭಾಗ್ಯನಗರದ ಪ್ರದೇಶದಲ್ಲಿ ಕಳೆದ ಹಲವು ದಿನಗಳ ಹಿಂದೆ ಮುಳ್ಳುಹಂದಿ(porcupine) ಕಾಣಿಸಿಕೊಂಡಿತ್ತು. ಇದರಿಂದಾಗಿ ಅಲ್ಲಿನ ಜನರು ತೀವ್ರ ಭಯಭೀತರಾಗಿದ್ದರು. ಬಳಿಕ ಸ್ಥಳೀಯರೊಬ್ಬರು ಅರಣ್ಯ ಅಧಿಕಾರಿ ಡಿಸಿಎಫ್ ಅಮರನಾಥ್ ಎಂಬುವವರಿಗೆ ಮಾಹಿತಿ ನೀಡುತ್ತಾರೆ. ಸ್ಥಳೀಯರ ಮಾಹಿತಿ ಮೇರೆಗೆ ತಕ್ಷಣ ಸ್ಥಳಕ್ಕೆ ಆಗಮಿಸಿ ಬಲೆಯಲ್ಲಿ ಕೆಡವಿ ಮುಳ್ಳು ಹಂದಿಯನ್ನ ಸೆರೆಹಿಡಿದು ನಂತರ ಭೀಮಗಢ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಟ್ಟು ಬಂದಿದ್ದಾರೆ.