ಮರದ ಅಂಬಾರಿ ತಾಲೀಮು ಆರಂಭಿಸಿದ ಕ್ಯಾಪ್ಟನ್ ಅಭಿಮನ್ಯು - Elephant Workout
🎬 Watch Now: Feature Video
ಮೈಸೂರು: ಜಂಬೂಸವಾರಿ ಮೆರವಣಿಗೆಗೆ ದಿನಗಣನೆ ಆರಂಭವಾಗುತ್ತಿರುವುದರಿಂದ ಗಜಪಡೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಮರದ ಅಂಬಾರಿ ತಾಲೀಮು ನಡೆಸಲಾಯಿತು. ಮರದ ಅಂಬಾರಿಗೆ ಅರಮನೆಯ ಪುರೋಹಿತರಿಂದ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದ ನಂತರ, ಸಿಬ್ಬಂದಿಗಳಿಂದ ಮರದ ಅಂಬಾರಿ ಕಟ್ಟುವ ಕಾರ್ಯ ನಡೆಯಿತು. ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ 9 ದಿನಗಳು ಮಾತ್ರ ಬಾಕಿ ಇರುವುದರಿಂದ ಗಜಪಡೆಯ ತಾಲೀಮು ಮತ್ತಷ್ಟು ಚುರುಕುಗೊಂಡಿದೆ. ಅಭಿಮನ್ಯುಗೆ ಕುಮ್ಕಿ ಆನೆಗಳಾದ ಕಾವೇರಿ ಹಾಗೂ ವಿಜಯ, ವಿಕ್ರಮ, ಗೋಪಿ ಸಾಥ್ ನೀಡಿದವು.