ಸಾರ್ವಜನಿಕರು ಯಾವುದೇ ಭಯವಿಲ್ಲದೆ ಬಸ್ಗಳಲ್ಲಿ ಓಡಾಡಬಹುದು: ಕೃಷ್ಣ ಭಾಜಪೇಯಿ - Hubli protest News 2020
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9871293-thumbnail-3x2-mng.jpg)
ಹುಬ್ಬಳ್ಳಿ: ಸಾರಿಗೆ ನೌಕರರಲ್ಲಿ ಕೆಲವು ಗೊಂದಲಗಳಿವೆ. ಹೀಗಾಗಿ ಕೆಲಸಕ್ಕೆ ಬರಲು ಹಿಂಜರಿಯುತ್ತಿದ್ದಾರೆ. ಶೀಘ್ರದಲ್ಲೇ ವಾಯವ್ಯ ಕರ್ನಾಟಕ ವಿಭಾಗದ ಎಲ್ಲಾ ಬಸ್ ಸಂಚಾರ ಆರಂಭಿಸಲಾಗುವುದು ಎಂದು ವಾಯವ್ಯ ಕರ್ನಾಟಕ ಸಂಸ್ಥೆ ಎಂಡಿ ಕೃಷ್ಣ ಭಾಜಪೇಯಿ ಹೇಳಿದರು. ನಗರದ ಬಸ್ ನಿಲ್ದಾಣದಲ್ಲಿ ಮಾತನಾಡಿದ ಅವರು, ಕೆಲವು ಗೊಂದಲಗಳಿಂದ ಬಸ್ ಸಂಚಾರ ವಿಳಂಬವಾಗಿದೆ. ಸಿಬ್ಬಂದಿ ಕೆಲಸಕ್ಕೆ ಮರಳಲು ಮನವೊಲಿಕೆ ಮಾಡಲಾಗುತ್ತಿದೆ. ಸರ್ಕಾರದ ಜೊತೆಗೆ ನೌಕರರ ಮಾತುಕತೆ ನಡೆದಿದೆ. ಆದ್ರೆ ಸಾರ್ವಜನಿಕರ ದೃಷ್ಟಿಯಿಂದ ಎಲ್ಲರೂ ಕೆಲಸಕ್ಕೆ ಹಾಜರಾಗಬೇಕು. ಸಾರ್ವಜನಿಕರು ಕೂಡ ಯಾವುದೇ ಭಯ, ಆತಂಕ ಇಲ್ಲದೆ ಬಸ್ಗಳಲ್ಲಿ ಪ್ರಯಾಣ ಬೆಳೆಸುವಂತೆ ಅವರು ಮನವಿ ಮಾಡಿದರು.