ರಾಜ್ಯದ ಆರ್ಥಿಕ ದುಸ್ಥಿತಿಯನ್ನು ಬಜೆಟ್ ತೋರಿಸಿದೆ: ಶಿವಲಿಂಗೇಗೌಡ - ಆರ್ಥಿಕ ದುಸ್ಥಿತಿಯನ್ನು ಬಜೆಟ್ ತೋರಿಸಿದೆ
🎬 Watch Now: Feature Video
ಬೆಂಗಳೂರು: ರಾಜ್ಯದಲ್ಲಿ ಆರ್ಥಿಕ ದುಸ್ಥಿತಿ ಉಂಟಾಗಿದೆ ಎನ್ನುವುದನ್ನು ಈ ಬಜೆಟ್ ಸ್ಪಷ್ಟವಾಗಿ ತೋರಿಸಿಕೊಟ್ಟಿದೆ ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅಭಿಪ್ರಾಯಪಟ್ಟಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಜೆಟ್ ಓದುವುದು ಕಷ್ಟವಾಗಲಿದೆ ಎಂಬ ಕಾರಣದಿಂದ 6 ವಲಯ ಮಾಡಿ ಚಿಕ್ಕದಾಗಿ ಬಜೆಟ್ ಪ್ರತಿ ಸಿದ್ಧಪಡಿಸಲಾಗಿದೆ. ಇದನ್ನು ಬಿಟ್ಟರೆ ವಿಶೇಷವಾಗಿ ಯಾವುದೇ ರೀತಿಯ ಹೊಸತನ ಬಜೆಟ್ನಲ್ಲಿ ಇಲ್ಲ. ಹೊಸ ಘೋಷಣೆಗಳು ಆಗಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿ ಮಂಡಿಸಿದ್ದ ಬಜೆಟ್ ಅರ್ಧದಷ್ಟು ಕಾಮಗಾರಿಗಳನ್ನು ಇದುವರೆಗೂ ಕೈಗೆತ್ತಿಕೊಂಡಿಲ್ಲ. ಒಂದು ಬಜೆಟ್ನಲ್ಲಿ ಘೋಷಿತವಾದ ಯೋಜನೆಯನ್ನ ಕಾರ್ಯಗತಗೊಳಿಸುವಲ್ಲಿ ಈ ಸರ್ಕಾರ ವಿಫಲವಾಗಿದೆ. ಹೊಸ ನಿರೂಪಣೆ ಕೊಡುವ ಹಾಗೂ ರಾಜ್ಯಕ್ಕೆ ಅಭಿವೃದ್ಧಿ ನೀಡುವ ಅಂಶಗಳು ಬಜೆಟ್ನಲ್ಲಿಲ್ಲ. ಕೇವಲ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ರೂಪಿಸುತ್ತೇವೆ ಎಂದಿದ್ದಾರೆ. ಯಾವುದೇ ರೀತಿಯ ಶಿಸ್ತು ಇಲ್ಲ ಎಂದಿದ್ದಾರೆ.