ಬಿಎಂಟಿಸಿ ಬಸ್ ಬ್ರೇಕ್ ಪೇಲ್... ಇಬ್ಬರ ಸಾವು, ಹತ್ತಾರು ಜನರಿಗೆ ಗಾಯ - Bangalore BMTC Accident News
🎬 Watch Now: Feature Video
ಬೆಂಗಳೂರಿನ ಕೊಟ್ಟಿಗೆಪಾಳ್ಯ ಬಳಿ ಬಿಎಂಟಿಸಿ ಬಸ್ ಬ್ರೇಕ್ ಫೇಲ್ ಆಗಿ ಬಸ್ ಮುಂದೆ ಹೋಗುತ್ತಿದ್ದ ಬೈಕ್ಗೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರರಿಬ್ಬರು ಮೃತಪಟ್ಟಿದ್ದಾರೆ. ಅಲ್ಲದೇ,ಇನ್ನೂ ಕೆಲವು ವಾಹನಗಳಿಗೆ ಡಿಕ್ಕಿಯಾದ ಪರಿಣಾಮ ಹಲವಾರು ಮಂದಿ ಗಾಯಗೊಂಡಿದ್ದು ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಪೋ ಮ್ಯಾನೇಜರ್ ಬಸ್ನ್ನ ಸರ್ವೀಸ್ ಮಾಡಿಸದೇ ರೋಡಿಗಿಳಿಸಿದ್ದೇ ಈ ಅನಾಹುತಕ್ಕೆ ಕಾರಣ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಎಂಟಿಸಿ ಎಂ.ಡಿ ಶಿಕಾ ಅವರು, ಮೃತಪಟ್ಟವರ ಅಂತ್ಯಸಂಸ್ಕಾರದ ಕರ್ಚಿಗಾಗಿ 25ಸಾವಿರ ಪರಿಹಾರ ನೀಡಿದ್ದೇವೆ. ಅಲ್ಲದೇ, ಗಾಯಾಳುಗಳಿಗೆ ಬಿಎಂಟಿಸಿಯಿಂದಲೇ ಚಿಕಿತ್ಸೆ ನೀಡಲಾಗುತ್ತಿದ್ದು,ಅಪಘಾತದ ತನಿಖೆಯ ನಂತರ ಸಾವಿಗೀಡದವರ ಕುಟುಂಬಕ್ಕೆ ಪರಿಹಾರ ಕೊಡುವುದಾಗಿ ತಿಳಿಸಿದ್ದಾರೆ.